Breaking
Wed. Dec 25th, 2024

ಉಮೇಶ ಕಾರಜೋಳ ಅವರ ನೇತೃತ್ವದಲ್ಲಿ ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಕುಡಿಯುವ ನೀರಿನ ಅರವಟಿಗೆಗಳನ್ನು ಸ್ಥಾಪನೆ…!

ಚಿತ್ರದುರ್ಗ. ಮೇ. 04 : ಬಿ.ಜೆ.ಪಿ ಎಸ್.ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅವರ ನೇತೃತ್ವದಲ್ಲಿ ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಕುಡಿಯುವ ನೀರಿನ ಅರವಟಿಗೆಗಳನ್ನು ಸ್ಥಾಪಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಉಮೇಶ ಕಾರಜೋಳ, ಬಿಸಿಲಿನ ತೀವ್ರತೆ ಅಧಿಕವಾಗಿದೆ, ಬಿಸಿಲಿನ ತಾಪತ್ರಯ ನಲಗುವಂತೆ ಮಾಡಿದೆ, ಹೀಗಾಗಿ ಗಿಡಮರಗಳನ್ನು ನೆಟ್ಟು ಉಷ್ಣಾಂಶ ಕಡಿಮೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ, ಪರಿಸರ ರಕ್ಷಣೆ, ಗಿಡಮರಗಳ ಪೋಷಣೆಯಿಂದ ಮಾತ್ರ ಉಷ್ಣತೆ ನಿಯಂತ್ರಿಸಬಹುದಾಗಿದೆ ಎಂದರು.

ಜನರ ಅನುಕೂಲಕ್ಕಾಗಿ ಪರಿಸರ ಸ್ನೇಹಿ, ಆರೋಗ್ಯಕ್ಕೆ ಹಿತಕಾರಿಯಾದ ಮಣ್ಣಿನ ಮಡಿಕೆಗಳಲ್ಲಿ ಪ್ರತಿ ನಿತ್ಯ ನೀರನ್ನು ತುಂಬಲಾಗುತ್ತಿದೆ, ಜಲ ಬರಿ ಜಲವಲ್ಲ ಅದು ಜೀವಜಲ, ಹೀಗಾಗಿ ಹನಿ ನೀರನ್ನು ಅಮೂಲ್ಯವಾಗಿ ಬಳಸೋಣ ಎಂದರು. 

ಈ ಪ್ರಾರಂಭದಲ್ಲಿ ಎರಡು ಕಡೆ ಈ ರೀತಿ ಅರವಟಿಗೆ ಆರಂಭಿಸಲಾಗಿದೆ, ನೀರಿನ ಲಭ್ಯತೆ ಆಧರಿಸಿ, ಜನರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಹ ಈ ಅರವಟಿಗೆ ಆರಂಭಿಸುವ ಯೋಜನೆ ಇದೆ, ಪಶು ಪಕ್ಷಿಗಳಿಗೂ ಸಹ ವಿಶೇಷ ಅರವಟಿಗೆ ನಿರ್ಮಾಣಕ್ಕೆ ಅಗತ್ಯ ಯೋಜನೆ ರೂಪಿಸಲಾಗುವುದು ಎಂದರು. 

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದ್ರಿನಾಧ್, ಅರುಣ, ಬಿಜೆಪಿ ವಕ್ತಾರ ನಾಗರಾಜ ಬೇದ್ರೆ, ಆದರ್ಶ ಹಾಗೂ ಅನೇಕರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *