ಚಿತ್ರದುರ್ಗ ಮುರುಘಾಮಠದಲ್ಲಿ ಮೇ 8 ರಿಂದ 10 ರವರೆಗೆ ಬಸವ ಜಯಂತಿ

ಚಿತ್ರದುರ್ಗ, ಮೇ. 06 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮೇ 8 ರಿಂದ 10ರವರೆಗೆ ಮಹಾಮಾನವತಾವಾದಿ ಸಾಂಸ್ಕøತಿಕ ನಾಯಕ ಶ್ರೀ ಬಸವೇಶ್ವರ ಜಯಂತಿ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ಚಿತ್ರದುರ್ಗವಾಣಿ ಆಕಾಶವಾಣಿಯಲ್ಲಿ ಮೇ 7ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಣ್ಣನವರ ಧಾರ್ಮಿಕ ಧ್ವನಿಗಳು ಮತ್ತು ಪ್ರಯೋಗಶೀಲತೆ ಕುರಿತು ಡಾ. ಲೋಕೇಶ್ ಅಗಸನಕಟ್ಟೆ, ಮೇ 8ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಣ್ಣನವರ ಸಾಮಾಜಿಕ ಚಿಂತನೆಗಳು ಕುರಿತು ಡಾ. ಎನ್. ಮಮತ, ಮೇ 9ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಾದಿ ಶರಣರ ಆರ್ಥಿಕ ಚಿಂತನೆಗಳು ಕುರಿತು ಡಾ. ಟಿ.ಆರ್. ಚಂದ್ರಶೇಖರ್ ಮತ್ತು ಮೇ 10ರಂದು ಬೆಳಗ್ಗೆ 8.30ರಿಂದ 9.30ರವರೆಗೆ ಬಸವಣ್ಣನವರ ಚಿಂತನೆಯ ಪ್ರಸ್ತುತಿ ಕುರಿತು ಚಂದ್ರಶೇಖರ್ ತಾಳ್ಯ ಅವರು ಚಿಂತನೆ ನೀಡಲಿದ್ದಾರೆ. 

ಮೇ 8ರಂದು ಸಂಜೆ 6 ಗಂಟೆಗೆ ವಚನಕಾರರ ದೃಷ್ಟಿಯಲ್ಲಿ ಬಸವಣ್ಣ ವಿಷಯ ಕುರಿತು ಚಿಂತನಗೋಷ್ಠಿ ಕಾರ್ಯಕ್ರಮ. ಬೆಂಗಳೂರು ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ವಿಷಯಾವಲೋಕನ ಮಾಡಲಿದ್ದಾರೆ, ಸಿಂಧನೂರು ಬಸವಕೇಂದ್ರ ಅಧ್ಯಕ್ಷ ವೀರಭದ್ರಪ್ಪ ಕುರಕುಂದಿ ಭಾಗವಹಿಸಿದ್ದರು. 

Related Post

Leave a Reply

Your email address will not be published. Required fields are marked *