ಭದ್ರಾವತಿ : ಗೋಮಾಂಸ ಮಾರಾಟ ಮಾಡುತಿದ್ದ ಹೊಟೆಲ್ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ಹೊಳೆಹೊನ್ನೂರಿನಲ್ಲಿ ನಡೆದಿದೆ. ಸಾರ್ವಜನಿಕ ದೂರಿನ ಮೇಲೆಗೆ ಹೊಳೆಹೊನ್ನೂರು ಪಟ್ಟಣದ ಹೋಟೆಲೊಂದರ ಮೇಲೆ ದಿಡೀರ್ ದಾಳಿ ನಡೆದಿದೆ.
ದಾಳಿ ಸಂಧರ್ಭದಲ್ಲಿ ಗೋಮಾಂಸ ಮಾರಾಟ ಮಾಡುವುದು ಖಾತರಿ ಯಾಗಿದೆ.ಹೋಟೆಲ್ ಮಾಲೀಕ ಮತ್ತು ಮೂವರು ಕೆಲಸಗಾರರಿದ್ದು ಮಾಲೀಕ ಗೋಮಾಂಸ ಅಡುಗೆ ಮಾಡಿ ಮಾರಾಟ ಮಾಡುವ ಕುರಿತು ಒಪ್ಪಿಕೊಂಡಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.