ತುಮಕುರು : ಸಾಲದ ಬಾದೆಗೆ ಹೆದರಿ ಮನನೊಂದು ರೈತ ಆತ್ಮಹತ್ಯೆ ಶರಣಾಗಿರುವ ಕೊರಟಗೆರೆ ತಾಲೂಕಿನ ಎಸ್‌ಐ ಎನ್‌ಜಿಎ ಹೋಬಳಿಯ ಕಬುಗೆರೆ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದ 38 ವರ್ಷದ ರಾಜಣ್ಣ ನೇಣಿಗೆ ಶರಣಾಗಿದ್ದಾನೆ. ಜಮೀನಿನಲ್ಲಿ ಬೋರ್ವೆಲ್ ಕೊರೆಸಲು ರೈತ ರಾಜಣ್ಣ ಹಲವು ಫೈನಾನ್ಸ್ ನಲ್ಲಿ 12 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದಾರೆ
ಜಮೀನಿನಲ್ಲಿ 5ಕ್ಕೂ ಹೆಚ್ಚು ಬೋರ್ವೆಲ್ ಕೊರೆಸಿದರು ನೀರು ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ತನ್ನ ಮನೆಯ ಮೇಲು ಸಾಲ ಮಾಡಿ ಬೋರ್ ವೆಲ್ ಕೊರೆಸಿದ್ದಷ್ಟೇ ಅಲ್ಲದೆ ತನ್ನ ಸ್ನೇಹಿತರ ಬಳಿಯೂ ಸಾಲ ಪಡೆದಿರುವ ರಾಜಣ್ಣ ಜಮೀನಿನ ಬೋರ್ವೆಲ್ ಗಳಲ್ಲಿ ನೀರು ಸಿಗಲಿಲ್ಲ ಹಾಗೂ ಸಾಲ ವಾಪಸ್ ಕೊಡಲು ಸಾಧ್ಯವಾಗಲಿಲ್ಲ ಎಂದು ಮನನೊಂದ ರೈತ ರಾಜಣ್ಣ ತಡರಾತ್ರಿ ತನ್ನ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎರಡು ವರ್ಷದಿಂದ ಮಳೆಯಾಗದೆ ಬೆಳೆಗಳೆಲ್ಲವೂ ನಾಶವಾಗಿ ರೈತರ ಸಾಲ ತೀರಿಸಲಾಗದೆ ನೇಣು ಹಾಕಿಕೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ ಮೈಕ್ರೋ ಫೈನಾನ್ಸ್ ಹಾಗೂ ಫೈನಾನ್ಸ್ ಕಂಪನಿಗಳ ಕಾಟ ಜಾಸ್ತಿ ಎಂದು ಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಬೇಕು ಮಳೆ ಬೆಳೆ ಇಲ್ಲದೆ ರೈತರ ಸಾಲ ಕಟ್ಟಬೇಕು ಈ ಘಟನೆಯನ್ನು ಗಮನಿಸಬೇಕು ರೈತರ ಪ್ರಾಣ ಉಳಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಸಿದ್ದರಾಜು ಆಗ್ರಹ.
ಘಟನೆಯಲ್ಲಿ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.