ಶಿವಮೊಗ್ಗ : ಸಾಗರ ತಾಲ್ಲೂಕು ಓಬಿಸಿ ಮೋರ್ಚಾ ಅಧ್ಯಕ್ಷ ವಿನೋದ್ರಾಜ್ ಅವರನ್ನು ಚುನಾವಣಾ ಸಮಯದಲ್ಲಿ ರಾಜಕೀಯ ದುರುದ್ದೇಶದಿಂದ ಬೀದರ್ ಜಿಲ್ಲೆಗೆ ಪಾರು ಮಾಡಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ ವೈ ರಾಘವೇಂದ್ರ ಮಾಧ್ಯಮದವರೊಂದಿಗೆ ಮಾತನಾಡಿ,
ನಿಷ್ಟಾವಂತ ಕಾರ್ಯಕರ್ತನಾಗಿದ್ದ ವಿನೋದ್‌ರಾಜ್ ಪಕ್ಷದ ಓಬಿಸಿ ಮೋರ್ಚಾದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದ, ಇವನ ಮೇಲೆ ಉದ್ದೇಶ ಪೂರ್ವಕವಾಗಿ ಸಲ್ಲದ ಆರೋಪವನ್ನು ಹೊರಿಸಿ ರೌಡಿಹಾಳೆ ತೆರೆದು ರಾಜಕೀಯ ಷಡ್ಯಂತ್ರ ನಡೆಸಲಾಯಿತು. ಇದನ್ನು ನಮ್ಮ ಪಕ್ಷ ತೀವ್ರವಾಗಿ ಕಂಡಿದೆ.ಕೂಡಲೇ ಗಡಿಪಾರು ಆದೇಶವನ್ನು ರದ್ದುಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕಳೆದ 15 ರ ಹಿಂದೆ ಸಾಗರ ಪಟ್ಟಣದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದ ಆತನಿಗೆ ದೈಹಿಕ ಹಿಂಸೆ ನೀಡಿ ಓಸಿ ವಿಷಯದಲ್ಲಿ ವಿನೋದ್‌ರಾಜ್ ಹೆಸರನ್ನು ಬಲವಂತವಾಗಿ ಹೇಳಿದ್ದಾರೆ. ಇದನ್ನು ನಮ್ಮ ಪಕ್ಷ ಖಂಡಿಸುತ್ತದೆ. ಯಾವುದೇ ಕಾರಣಕ್ಕೂ ರಾಜಕೀಯ ದುರುದ್ದೇಶದ ಇಂತಹ ಚಟುವಟಿಕೆಗಳಿಗೆ ಆಸ್ಪದ ಕೊಡುವುದಿಲ್ಲ. ಕೂಡಲೇ ಆ ವಿನೋದ್‌ರಾಜ್‌ನನ್ನು ನಾಡಿನ ಚುನಾವಣಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇರಾಜ್, ಮುಖಂಡರಾದ ಎಸ್.ದತ್ತಾತಿ, ಜ್ಯೋತಿ, ಹರಿಕೃಷ್ಣ, ಉಷಾ ಉತ್ತಪ್ಪ, ಇನ್ನೂ ಮುಂತಾದವರು ಇದ್ದಾರೆ.