Breaking
Tue. Dec 24th, 2024

ಗ್ರಾಹಕರ ವಿದ್ಯುತ್‌ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಪಯಾರ್ಯ ವಾಟ್ಸ್ಆ್ಯಪ್ ಸಂಖ್ಯೆ…!

ಬೆಂಗಳೂರು, ಮೇ 07: ನಗರದಲ್ಲಿ ಕಳೆದ ಮೂರು ದಿನಗಳಿಂದ ಮಳೆ  ಆಗುತ್ತಿದೆ. ನಿನ್ನೆ ಅರ್ಧಗಂಟೆ ಸುರಿದ ಮಳೆ ಅರ್ಧ ಬೆಂಗಳೂರನ್ನೇ ಅಲ್ಲಾಡಿಸಿತ್ತು. ನಗರದ 25ಕ್ಕೂ ಹೆಚ್ಚು ಭಾಗಗಳಲ್ಲಿ 25ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದವು. ವಿದ್ಯುತ್  ಇಲ್ಲದೇ ಜನರು ಪರದಾಡಿದ್ದರು. ಗಾಳಿ-ಮಳೆಗೆ ವಿದ್ಯುತ್‌ ಕಂಬಗಳು ಮುರಿದು, ವಿದ್ಯುತ್‌ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ. ಹೀಗಾಗಿ ಬೆಸ್ಕಾಂ ಸಹಾಯವಾಣಿ 1912ಗೆ ದೂರುಗಳು ಹರಿದು ಬಂದಿದ್ದು, ಕರೆಗಳ ಒತ್ತಡದಿಂದಾಗಿ ಗ್ರಾಹಕರಿಗೆ 1912 ಸಂಪರ್ಕ ಸಾಧ್ಯವಾಗುತ್ತಿಲ್ಲ.   

ಈ ಕಾರಣಕ್ಕೆ ಮಳೆಗಾಲದಲ್ಲಿ ಗ್ರಾಹಕರ ವಿದ್ಯುತ್‌ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ ಗ್ರಾಹಕರಿಗೆ ಈ ಕೆಳಕಂಡ ಪಯಾರ್ಯ ವಾಟ್ಸ್ಆ್ಯಪ್ ಸಂಖ್ಯೆಗಳನ್ನು ನೀಡಲಾಗಿದೆ. ವಾಟ್ಸ್ಆ್ಯಪ್ ಸಂಖ್ಯೆಗಳಿಗೆ ಗ್ರಾಹಕರು ಸಂದೇಶ ಹಾಗೂ ಛಾಯಚಿತ್ರಗಳನ್ನು ತಮ್ಮ ವಿಳಾಸದೊಂದಿಗೆ ಕಳುಹಿಸಿ ತಮ್ಮ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದಾಗಿದೆ. ಜೊತೆಗೆ ಎಸ್ಎಂಎಸ್ ಗಳನ್ನು ಕಳುಹಿಸಲು ಬೆಸ್ಕಾಂ ಬೆಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಹಕರಿಗೆ 12 ಮೊಬೈಲ್‌ ಸಂಖ್ಯೆಗಳನ್ನು ಕೂಡ ಒದಗಿಸಲಾಗಿದೆ.

  ಜಿಲ್ಲಾವಾರು ವಾಟ್ಸ್ಆ್ಯಪ್ ಸಂಖ್ಯೆಗಳು

ಬೆಂಗಳೂರು ಪೂರ್ವ: 8277884013

ಬೆಂಗಳೂರು ಪಶ್ಚಿಮ: 8277884012

ಬೆಂಗಳೂರು ಉತ್ತರ: 8277884014

ಬೆಂಗಳೂರು ದಕ್ಷಿಣ: 8277884011

ಕೋಲಾರ: 8277884015

ಚಿಕ್ಕಬಳ್ಳಾಪುರ: 8277884016

ಬೆಂಗಳೂರು ಗ್ರಾಮಾಂತರ: 8277884017

ರಾಮನಗರ: 8277884018

ತುಮಕೂರು: 8277884019

ಚಿತ್ರದುರ್ಗ: 8277884020

ದಾವಣಗೆರೆ: 8277884021. 

ಸುರಕ್ಷತೆ ಸಂಬಂಧಿಸಿದ ದೂರುಗಳಿಗೆ ವಾಟ್ಸ್ಆ್ಯಪ್ ಸಂಖ್ಯೆ: 9483191212, 9483191222

ಬೆಸ್ಕಾಂ ಸಾಮಾನ್ಯ ವಾಟ್ಸ್ಆ್ಯಪ್ ಸಂಖ್ಯೆ: 9449844640

ಕೇವಲ ಎಸ್‌ಎಂಎಸ್ಗಳಿಗೆ ಮಾತ್ರ  9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118 ಮತ್ತು 9480816119. 

ನಿನ್ನೆ ಸುರಿದ ಜೋರು ಮಳೆಗೆ ಬೃಹತ್ ಮರಗಳು ಧರೆಗುರುಳಿದ್ದವು. ಲಕ್ಷಾಂತರ ರೂಪಾಯಿ ಸುರಿದು ಖರೀದಿಸಿದ ಕಾರುಗಳು ಜಖಂಗೊಂಡಿದ್ದವು. ಅಂಡರ್ಪಾಸ್ಗಳಲ್ಲಿ ನೀರು ತುಂಬಿಕೊಂಡಿದ್ದವು. ಯಾವ ರಸ್ತೆಗೆ ಕಾಲಿಟ್ಟರೂ ಪ್ರವಾಹದಂತೆ ಭಾಸವಾಗುತ್ತಿತ್ತು. ನಿನ್ನೆ ಸುರಿದ ಮಳೆಗೆ ಹತ್ತಾರು ಅವಾಂತರಗಳು ಸೃಷ್ಟಿಯಾಗಿದ್ದವು. ಇನ್ನು ಮೇ 10ರ ವರೆಗೂ ಬೆಂಗಳೂರಿನಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Related Post

Leave a Reply

Your email address will not be published. Required fields are marked *