ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ಇಂದು ಲೋಕಸಭಾ ಚುನಾವಣೆ 2024 ನಡೆಯುತ್ತಿದೆ, ಸ್ಯಾಂಡಲ್ವುಡ್ ತಾರೆಯರು ಕೂಡ ಮತ ಚಲಾಯಿಸುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ.
ಪದವಿ ಪೂರ್ವ’ ಸಿನಿಮಾದ ನಟ ಪೃಥ್ವಿ ಶಾಮನೂರು ಅವರು ತಮ್ಮ ಕುಟುಂಬದ ಜೊತೆ ದಾವಣಗೆರೆಯಲ್ಲಿ ವೋಟ್ ಮಾಡಿದ್ದಾರೆ. ಶಿವಮೊಗ್ಗದಲ್ಲಿ ನಟಿ ಶ್ವೇತಾ ಆರ್. ಪ್ರಸಾದ್ ವೋಟ್ ಮಾಡಿದ್ದು, ಅಭಿಮಾನಿಗಳಿಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ನಟ ಬಿ.ಸಿ ಪಾಟೀಲ್ ಕೂಡ ತಮ್ಮ ಕುಟುಂಬದ ಜೊತೆ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಲೋಕಸಭಾ ಚುನಾವಣೆ ಇಂದು ಕುಟುಂಬ ಸಮೇತವಾಗಿ ಹಿರೇಕೆರೂರಿನ ಬಾಳಂಬೀಡ ಗ್ರಾಮದ ಮತಗಟ್ಟೆಗೆ ತೆರಳಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಲಾಗಿದೆ ಎಂದು ನಟ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
ನಟಿ ಸೃಷ್ಟಿ ಪಾಟೀಲ್ ಅವರು ಹಿರೇಕೆರೂರಿನ ಬಾಳಂಬೀಡ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಎಲ್ಲರೂ ಮತದಾನ ಎಂದು ನಟಿ ಮನವಿ ಮಾಡಿದ್ದಾರೆ.