Breaking
Wed. Dec 25th, 2024

ಲೋಕಸಭೆಗೆ  2ನೇ ಹಂತದಲ್ಲಿ ಮತದಾನ ನಡೆದಿದೆ…!

ಬೆಂಗಳೂರು  : ಕರ್ನಾಟಕದಲ್ಲಿಂದು ಮೇ 07 ಲೋಕಸಭೆಗೆ  2ನೇ ಹಂತದಲ್ಲಿ ಮತದಾನ ನಡೆದಿದ್ದು, ಬಾಕಿ ಉಳಿದಿದ್ದ14 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, 227 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಇನ್ನು ಮೊದಲನೇ ಹಂತಕ್ಕೆ ಎರಡನೇ ಹಂತದಲ್ಲಿ ಭರ್ಜರಿ ಮತದಾನ ಆಗಿದೆ.

ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡಾ 69.37ರಷ್ಟು ಮತದಾನವಾಗಿದೆ. ಸಿಟಿ ಮಂದಿಗೆ ಹೋಲಿಸಿದ್ರೆ ಹಳ್ಳಿ ಮಂದಿ ಭರ್ಜರಿ ವೋಟಿಂಗ್ ಮಾಡಿದ್ದಾರೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದ 14 ಕ್ಷೇತ್ರದಲ್ಲಿ ಬಿರುಸಿನ ಮತದಾನವಾಗಿದೆ. ಬಿರು ಬಿಸಿಲನ್ನೂ ಲೆಕ್ಕಿಸದೇ ಮತದಾರರು ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ್ದಾರೆ. 

ಎಲ್ಲೆಲ್ಲಿ ಎಷ್ಟು ಮತದಾನವಾಗಿದೆ? :  ರಾಯಚೂರು 60.72%, ಬೀದರ್ 63.65%, ಕಲಬುರಗಿ 61.73%, ಚಿಕ್ಕೋಡಿ 74.39%, ಕೊಪ್ಪಳ 69.50%, ವಿಜಯಪುರ 64.71%, ಬಾಗಲಕೋಟೆ 70.47%, ಬೆಳಗಾವಿ 70.84%, ಬಳ್ಳಾರಿ 69.74%, ಹಾವೇರಿ 72.59%, ಶಿವಮೊಗ್ಗ 76.05%, ಉತ್ತರ ಕನ್ನಡ 73.52%, ದಾವಣಗೆರೆ 75.48%, ಧಾರವಾಡ ಕ್ಷೇತ್ರದಲ್ಲಿ ಶೇ. 70.54ರಷ್ಟು ಮತದಾನವಾಗಿದೆ.

ಮೊದಲ ಹಂತದ 14 ಕ್ಷೇತ್ರಗಳಲ್ಲಿ ಎಷ್ಟು ಮತದಾನ?   ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಶೇಕಡಾ 69.56 ರಷ್ಟು ಮತದಾನವಾಗಿತ್ತು. ಮಂಡ್ಯದಲ್ಲಿ (ಶೇ 81.67), ಕೋಲಾರದಲ್ಲಿ (ಶೇ 78.27) ಮತ್ತು ತುಮಕೂರಿನಲ್ಲಿ (ಶೇ 78.05 ರಷ್ಟು) ಅತಿ ಹೆಚ್ಚು ಮತದಾನವಾಗಿತ್ತು. ಬೆಂಗಳೂರು ಸೆಟ್ರಲ್ನಲ್ಲಿ ಶೇ 54.06, ಬೆಂಗಳೂರು ದಕ್ಷಿಣದಲ್ಲಿ ಶೇ 53.17, ಬೆಂಗಳೂರು ಉತ್ತರದಲ್ಲಿ ಶೇ 54.45 ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಶೇ 68.30ರಷ್ಟು ಮತದಾನವಾಗಿತ್ತು. 

ಒಟ್ಟು 474 ಅಭ್ಯರ್ಥಿಗಳ ಭವಿಷ್ಯ ಎವಿಎಂನಲ್ಲಿ  ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 247 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಇದೀಗ ಎರಡನೇ ಹಂತದಲ್ಲಿ ಒಟ್ಟು 227 ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದೆ. ಇದರೊಂದಿಗೆ ರಾಜ್ಯದ 28 ಕ್ಷೇತ್ರಗಳ ಒಟ್ಟಾರೆ 474 ಅಭ್ಯರ್ಥಿಗಳ ಭವಿಷ್ಯ ಎವಿಎಂನಲ್ಲಿ ಭದ್ರವಾಗಿದ್ದು, ಯಾರು ಗೆಲ್ಲಲಿದ್ದಾರೆ? ಯಾರು ಸೋಲುತ್ತಾರೆ ಎನ್ನುವುದನ್ನು ಜೂನ್ 4 ರವರೆಗೆ ಕಾಯಬೇಕಿದೆ.

Related Post

Leave a Reply

Your email address will not be published. Required fields are marked *