ಚಿತ್ರದುರ್ಗ,ಮೇ.08 : ಶಿಕ್ಷಕರುಗಳಿಗೆ ಓಪಿಎಸ್ ಅಥವಾ ಪಿಂಚಣಿಯನ್ನು ಕೊಡಿಸುವುದು. ಕಾಲ್ಪನಿಕ ವೇತನವನ್ನು ಕೊಡಿಸುವುದು. ಬಡ್ತಿ ಪಡೆದ ಶಿಕ್ಷಕರಿಗೆ ಟೈಮ್ ಬಾಂಡ್ ಮತ್ತು ಇನ್ನಿ ಮೆಂಟ್ ಕೊಡಿಸುವುದು. ವೇತನ ತಾರತಮ್ಯವನ್ನು ಸರಿಪಡಿಸು ವುದು. ಅನುದಾನರಹಿತ ಶಾಲಾ ಕಾಲೇಜ್ ಶಿಕ್ಷಕರ ಸೇವಾಭದ್ರತೆ ಹಾಗೂ ಸಮಾನ ವೇತನ ಕೊಡಿಸುವುದು 1995 ರ ನಂತರದ ಕನ್ನಡ ಮತ್ತು ಇತರೆ ಭಾಷೆಗಳ ಎಲ್ಲಾ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು. ಸೇರಿದಂತೆ ಇತರೆ ಬೇಡಿಕೆಯನ್ನು ಈಡೇರಿಸುವುದಕ್ಕಾಗಿ ವಿಧಾನ ಪರಿಷತ್‍ನಲ್ಲಿ ಶಿಕ್ಷಕರ ಪರವಾಗಿ ಹೋರಾಟವನ್ನು ಮಾಡಲಾಗುವುದು ಎಂದು ರುಪ್ಪ ಕರ್ನಾಟಕದ ಅಧ್ಯಕ್ಷ, ವಿಧಾನ ಪರಿಷತ್‍ನ ಆಗ್ನೆಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ (ಲೋಕೇಶ್ವರಪ್ಪ) ಮತದಾರರಿಗೆ ಭರವಸೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಷತ್ತಿನ ಈ ಸದಸ್ಯರು ರಾಜ್ಯದ ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಮತ್ತು ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ಸುಸ್ಥಿರ ಕರ್ನಾಟಕವನ್ನು ಕಟ್ಟಿಕೊಡುವ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಮತ್ತು ಹೆಚ್ಚು ಹೆಚ್ಚು ಉದ್ಯೋಗಗಳನ್ನುಸೃಷ್ಟಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ನಡೆಸುವ ಕ್ರಿಯಾಶೀಲ ವ್ಯಕ್ತಿಗಳಾಗಿರಬೇಕಿದೆ.
ಆದರೆ ಪರಿಷತ್ತಿನ ಈ ಸದಸ್ಯರು ತಾವು ಚುನಾಯಿತರಾಗಿಹೋದ ಶಿಕ್ಷಕರ ಕ್ಷೇತ್ರದ ಮತ್ತು ಶಿಕ್ಷಕರ ಹಿತ ರಕ್ಷಣೆ ಪ್ರಮುಖವಾದದ್ದು. ಶಿಕ್ಷಕರ ಹಿತ ಕಾಯುವ ಜೊತೆಜೊತೆಗೆ ಜನರಿಗೆ ಆಸರೆಯಾಗಿರುವ ಸಾರ್ವಜನಿಕ ಶಿಕ್ಷಣದ ಹಿತ ಕಾಯುವುದೂ ಇವರ ಮೇಲಿನ ಗುರುತರ ಜವಾಬ್ದಾರಿ. ಪರಿಷತ್ತಿನ ಈ ಸದಸ್ಯರು ರಾಜ್ಯದ ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಮತ್ತು ಎಲ್ಲಾ ವರ್ಗದ ಜನರನ್ನು ಒಳಗೊಳ್ಳುವ ಸುಸ್ಥಿರ ಕರ್ನಾಟಕವನ್ನು ಕಟ್ಟಿಕೊಡುವ ಜವಾಬ್ದಾರಿಯನ್ನು ನಿರ್ವಹಿಸ ಬೇಕಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಮತ್ತು ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ವಿಧಾನ ಪರಿಷತ್ತಿನ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ನಡೆಸುವ ಕ್ರಿಯಾಶೀಲ ವ್ಯಕ್ತಿಗಳಾಗಿರಬೇಕಿದೆ ಎಂದರು. ಪರಿಷತ್ತಿನ ಈ ಸದಸ್ಯರು ತಾವು ಚುನಾಯಿತರಾಗಿಹೋದ ಶಿಕ್ಷಕರ ಕ್ಷೇತ್ರದ ಮತ್ತು ಶಿಕ್ಷಕರ ಹಿತ ರಕ್ಷಣೆ ಪ್ರಮುಖ ವಾದದ್ದು.
ಶಿಕ್ಷಕರ ಹಿತ ಕಾಯುವ ಜೊತೆಜೊತೆಗೆ ಜನರಿಗೆ ಆಸರೆಯಾಗಿರುವ ಸಾರ್ವಜನಿಕ ಶಿಕ್ಷಣದ ಹಿತ ಕಾಯುವುದೂ ಇವರ ಮೇಲಿನ ಗುರುತರ ಜವಾಬ್ದಾರಿ. ಆದರೆ ಕಳೆದ ಎರಡು ಮೂರು ದಶಕಗಳಿಂದ ಪದವೀಧರರು ಮತ್ತು ಶಿಕ್ಷಕರ ಮೂಲಕ ಆಯ್ಕೆ ಯಾಗುವ ಸದಸ್ಯರು ತಮ್ಮನ್ನು ಆರಿಸಿ ಕಳಿಸಿದ ಕ್ಷೇತ್ರದ ಜನರ ಹಿತ ಕಾಪಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ಮೂಲಕ ಕೆಲಸ ಮಾಡುವ ಬದಲು ಸ್ವಾರ್ಥ, ಸ್ವಜನ ಪಕ್ಷಪಾತ, ಅಧಿಕಾರ ವ್ಯಾಮೋಹ, ಮತ್ತು ಹಣಕ್ಕಾಗಿ ಕೆಲಸ ನಿರ್ವಹಿಸುವ ಮೂಲಕ ತಮ್ಮ ಸ್ಥಾನಗಳಿಗೆ ಚುತಿ ತಂದಿದ್ದಾರೆ. ನಮ್ಮ ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರಿಗೆ ಅವರದೇ ಆದ ಧ್ವನಿ ಇಲ್ಲ ದಂತಾಗಿದೆ. ಕಾರಣ ಸರ್ಕಾರಗಳು, ಅಧಿಕಾರಿಗಳು ತಮ್ಮ ಮನ ಬಂದಂತೆ ಅವೈಜ್ಞಾನಿಕ ಕಾಯಿದೆಗಳನ್ನು ರೂಪಿಸುತ್ತಲೇ ಇದ್ದಾರೆ.
ಕಳೆದ ಎರಡು ದಶಕದ ನನ್ನ ಅನುಭವದಲ್ಲಿ ಈ ವ್ಯವಸ್ಥೆಯಲ್ಲಿಯ ಲೋಪ ದೋಷಗಳನ್ನು ಸರಿಪಡಿಸಲು ಶಿಕ್ಷಣ ಸಂಸ್ಥೆಗಳನ್ನು, ಶಿಕ್ಷಕರನ್ನು ಒಗ್ಗೂಡಿಸಿ, ಪಕ್ಷಾತೀತವಾಗಿ, ಬಲವಾದ ಹೋರಾಟಗಳನ್ನು ಜನಪರ ನೆಲೆಯಲ್ಲಿ ನಡೆಸಿ ಕೊಂಡು ಬಂದಿದ್ದೇನೆ. ಈ ಹೋರಾಟವನ್ನು ಮುಂದುವರಿಸುತ್ತಲೇ ಸರ್ಕಾರದ ಗಮನ ಸೆಳೆದು ಜನಪರವಾದ ತೀರ್ಮಾನಗಳನ್ನು ಕೈಗೊಳ್ಳಲು ಮತ್ತು ಸರ್ಕಾರವನ್ನು ಒತ್ತಾಯಿಸಲು ವಿಧಾನ ಪರಿಷತ್ತು ಚುನಾವಣೆ ಒಂದು ಉತ್ತಮ ವೇದಿಕೆಯಾಗಲಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿಗೆ ಆತ್ಮೀಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಿಮ್ಮೆಲ್ಲರ ಆಶಯದ ಮೇರೆಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ಗೆಲುವೇ ನಿಮ್ಮ ಗೆಲುವು. ವಿಧಾನ ಪರಿಷತ್‍ನಲ್ಲಿ ನಾನು ನಿಮ್ಮ ಧ್ವನಿಯಾಗಲಿದ್ದೇನೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಧುಗಿರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಈ ಚುನಾವಣೆಯಲ್ಲಿ ಸುಶಿಕ್ಷಿತರಾದ ನಾವು ಈ ಬಗ್ಗೆ ಗಂಭೀರವಾಗಿ ಯೋಚಿಸಿ ತೀರ್ಮಾನಿಸಿ ಮತ ಚಲಾಯಿಸಬೇಕಿದೆ ಎಂದರು.
ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕೋವಿಡ್ ಪ್ಯಾಕೇಜ್ ಕೊಡಿಸಲಾಗಿದೆ. ಶಿಕ್ಷಕರ ಕಲ್ಯಾಣ ನಿಧಿ ಸಂಸ್ಥೆಯಲ್ಲಿ ಎಲ್ಲಾ ಶಿಕ್ಷಕರಿಗೂ ನಗದು ರಹಿತ ಆರೋಗ್ಯ ವಿಮಾ ಸೌಲಭ್ಯ ಕೊಡಿಸುವ ಆದೇಶ ಮಾಡಿಸಲಾಗಿದೆ. ಸರ್ಕಾರಿ ಶಾಲೆಗಳಿಗೆ 15000 ಶಿಕ್ಷಕರನ್ನು ಭರ್ತಿ ಮಾಡಲು ಒತ್ತಾಯಿಸಿ ಯಶಸ್ವಿಯಾಗಿದ್ದೆನೆ. ಹತ್ತು ವರ್ಷಕ್ಕೊಮ್ಮೆ ಆರ್ ಆರ್ (ಮಾನ್ಯತೆನವೀಕರಣ) ನೀಡಲು ರಾಜ್ಯ ಹೈಕೋರ್ಟ್ ನಿಂದ ಆದೇಶ ಕೊಡಿಸಲಾಗಿದೆ. 8ನೇ ತರಗತಿಯವರೆಗೆ ಯಾವುದೇ ಬೋರ್ಡ್ ಪರೀಕ್ಷೆ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿಂದ ತೀರ್ಪು ಪಡೆಯಲಾಗಿದೆ. ಹೈಸ್ಕೂಲ್‍ಗೆ ಅನುಮತಿ, ಹಾಗೂ ಅನ್ಯಪಠ್ಯಕ್ರಮಕ್ಕೆ ಅನುಮತಿ ನೀಡುವ ಅಧಿಕಾರವನ್ನು ಡಿಡಿಪಿಐಗೆ ನೀಡಿಸಿದ್ದು. ಇವು ಸಾಂಕೇತಿಕ ಮಾತ್ರ. ಇನ್ನು ಮುಂತಾದ ಅನೇಕ ಸಮಸ್ಯೆಗಳನ್ನು ತಮ್ಮ ಸಹಕಾರದಿಂದ ಬಗೆಹರಿಸಲಾಗಿದೆ ಎಂದಿದ್ದಾರೆ.
ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ರುವ ಎಲ್ಲ ಶಿಕ್ಷಕರಿಗೂ ನಗದು ರಹಿತ ಆರೋಗ್ಯ ವಿಮೆ ಕೊಡಿಸುವುದು.ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆ ಕಾಲೇಜ್ ಗಳಿಗೆ ಮಾನ್ಯತೆ ನವೀಕರಣವನ್ನು ಭ್ರಷ್ಟಾಚಾರ ಮುಕ್ತ ವಾಗಿಸಿ ಶಾಶ್ವತ ಮಾನ್ಯತೆ ನವೀಕರಣ ಪಡೆಯುವಂತಾಗಿಸುವುದು. ಶಾಲಾ ಕಾಲೇಜ್ ಗಳಲ್ಲಿ ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಸುವುದು.ಎಲ್ಲಾ ವರ್ಗದ ಅತಿಥಿ ಶಿಕ್ಷಕರನ್ನು ಕಾಯಂ ಗೊಳಿಸುವುದು.ಐಟಿಐ, ಡಿಪ್ಲೋಮೋ, ಹಾಗೂ ಬಿಎಡ್ ಮುಂತಾದ ಕಾಲೇಜುಗಳಲ್ಲಿ ಯ ಶಿಕ್ಷಕರ ಸಮಸ್ಯೆಗಳನ್ನು ಹೋಗಲಾಡಿಸುವುದು.ಅನುದಾನಿತ ಶಾಲೆಗಳಲ್ಲಿ ಯ 2015ರ ನಂತರದ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಸುವುದು. ಅನುದಾನಿತ ಶಾಲಾ ಕಾಲೇಜುಗಳ ತರಗತಿಗಳ ವಿದ್ಯಾರ್ಥಿಗಳ ಮಿತಿಯನ್ನು ಕನಿಷ್ಠ 10ಕ್ಕೆ ಇಳಿಸುವುದು 14, ಅನುದಾನಿತ ಸಂಸ್ಥೆಗಳ ಶಿಕ್ಷಕರುಗಳಿಗೆ ವಿಳಂಬ ಎಲ್ಲ ದ ಕಾಲಕಾಲಕ್ಕೆ ಸಂಬಳ ಕೊಡಿಸುವುದು ಸೇರಿಕೊಂಡಂತೆ ಒಟ್ಟಾರೆ ಶಿಕ್ಷಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಸರ್ಕಾರದಿಂದ, ಮತ್ತು ಅಧಿಕಾರಿಗಳಿಂದ ಕಿರುಕುಳ ಆಗದಂತೆ ನೋಡಿಕೊಳ್ಳುವುದು ನನ್ನ ಮೂಲ ಗುರಿಗಳು.
ಇವುಗಳ ಕುರಿತು ಪ್ರಾಮಾಣಿಕವಾಗಿ ಹೋರಾಡುತ್ತೇನೆ ಎಂದು ಮತದಾರರಿಗೆ ಭರವಸೆಯನ್ನು ನೀಡಿದರು. ಗೋಷ್ಟಿಯಲ್ಲಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ಯಾದಲಗಟ್ಟ ಜಗನ್ನಾಥ್, ರುಪ್ಪ ಉಪಾಧ್ಯಕ್ಷರಾದ ವೆಂಕಟೇಶ್ ಉಪಸ್ಥಿತರಿದ್ದರು.