ರಾಯಚೂರು : ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ರಾಯಚೂರು ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ನಡೆದಿದೆ.
ಜೇಗರ್‌ಕಲ್ ಮಲ್ಲಾಪುರ ಗ್ರಾಮದ ವಿನಾಯಕ (10) ಮೃತ ಬಾಲಕ. ಮೃತ ಬಾಲಕ ಮಂಗಳವಾರ ಕುಟುಂಬಸ್ಥರೊಂದಿಗೆ ಈಜು ಕಲಿಯಲು ಪಕ್ಕದೂರು ಹೆಂಬೆರಾಳದ ಹಳ್ಳಕ್ಕೆ ಹೋಗಿದ್ದ. ನೀರಿನ ಆಳ ಹೆಚ್ಚಿದ್ದ ಕಡೆ ವಿನಾಯಕ ಈಜಲು ತೆರಳಿದ್ದ. ಈಜು ಬಾರದ ಹಿನ್ನೆಲೆ ನೀರುಪಾಲಾಗಿದ್ದಾನೆ.
ಸ್ಥಳೀಯರು ಹಳ್ಳದಲ್ಲಿ ವಿನಾಯಕನ ಮೃತದೇಹವನ್ನು ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ಘಟನೆ ನಡೆದಿದೆ.