ಬೆಂಗಳೂರು : ಮನೆಗೆಲಸದಾಕೆ ಮೇಲೆ ದೌರ್ಜನ್ಯ ಮತ್ತು ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಕಸ್ಟಡಿ ಅವಧಿ ಇಂದು ಅಂತ್ಯ. ಆರೋಪಿಗಳು ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ಸಿಗುತ್ತದೆಯೇ ಅಥವಾ ಜೈಲಿಗೆ ಹೋಗುತ್ತಾರೆಯೇ ಎಂಬುದು ನಿರ್ಧಾರ.
ದೌರ್ಜನ್ಯ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ರೇವಣ್ಣರ ಹೆಚ್ಚಿನ ವಿಚಾರಣೆಯ ಅವಶ್ಯಕತೆಯಿದೆ ಎಂದು ಎಸ್‌ಐಟಿ (ಎಸ್‌ಐಟಿ) ಅಧಿಕಾರಿಗಳು ನಾಲ್ಕು ದಿನ ಕಸ್ಟಡಿಗೆ ಪಡೆದಿದ್ದರು. ಇಂದು ಆರೋಪಿ ರೇವಣ್ಣ ಅವರ ಎಸ್‌ಐಟಿ ಕಸ್ಟಡಿ ಅಂತ್ಯವಾಗಲಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
ಜಾಮೀನು ತೀರ್ಪು ಆರೋಪಿ ಪರ ಬಂದರೆ ರೇವಣ್ಣ ಮನೆಗೆ ಹೋಗುತ್ತಾರೆ. ಜಾಮೀನು ಸಿಗದೇ ಹೋದರೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಲಿದ್ದಾರೆ. ಬಹುಶಃ ಕಿಡ್ನ್ಯಾಪ್ ಕೇಸ್‌ನಲ್ಲಿ ವಿಚಾರಣೆ ಮುಗಿದಿರುವ ಹಿನ್ನೆಲೆ ಕಸ್ಟಡಿಗೆ ಕೇಳುವ ಸಾಧ್ಯತೆ ಕಡಿಮೆಯಾಗಿದೆ.
ಎಸ್‌ಐಟಿ ಮೂಲಗಳು ಸಂತ್ರಸ್ತ ಮಹಿಳೆ ಕಿಡ್ನ್ಯಾಪ್ ಕೇಸ್‌ನಲ್ಲಿ ಬಂಧನವಾಗಿರೋ ರೇವಣ್ಣಗೆ ರೋಟಿನ್ ಚೆಕಪ್‌ಗೆ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆರೋಪಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಗೊಂಡ ಕಾರಣ ಎದೆ ಉರಿ ಹೆಚ್ಚಾಗಿತ್ತು. ಈ ಹಿನ್ನೆಲೆ ಬೌರಿಂಗ್ ಆಸ್ಪತ್ರೆಯಲ್ಲಿ ಆರೋಪಿಗೆ ಎಳನೀರು ಕುಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಎದೆ ಉರಿ ಹೆಚ್ಚಾಗಿ ಆಸ್ಪತ್ರೆ ವೈದ್ಯರು ವಿಕ್ಟೋರಿಯಾ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ನಂತರ ಹೆಚ್.ಡಿ.ರೇವಣ್ಣ ಡಿಸ್ಚಾರ್ಜ್ ಆಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇವಣ್ಣಗೆ ಇಸಿಜಿ, ಅಲ್ಟ್ರಾಸೌಂಡ್, ಎಕ್ಸ್ ರೇ ಮತ್ತು ಬ್ಲಡ್ ಟೆಸ್ಟ್ ಮಾಡಿಸಲಾಯ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂರು ಗಂಟೆಗಳ ಕಾಲ ಚಿಕಿತ್ಸೆ ನೀಡಿ ನಾರ್ಮಲ್ ಬಂದ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಎಸ್ ಐಟಿಗೆ ಕಳಿಸಿಕೊಟ್ಟಿದ್ದಾರೆ.
ಹೊಟ್ಟೆನೋವು, ಎದೆನೋವು ಗ್ಯಾಸ್ಟ್ರಿಕ್‌ನಿಂದ ಬಂದಿರೋದು ಅಥವಾ ಬೇರೆ ಸಮಸ್ಯೆ ಏನಾದ್ರು ನೋಡಿದ್ಯಾ ಅಂತಾ ಚೆಕ್ ಮಾಡಿ ನಾರ್ಮಲ್ ಬಳಿಕ ವೈದ್ಯರು ಡಿಸ್ಚಾರ್ಜ್ ಮಾಡಿ ಕಳಿಸಿಕೊಟ್ಟಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಎಸ್‌ಐಟಿ ಎಸ್‌ಪಿ ಸುಮನಾ ಡಿ ಪನ್ನೇಕರ್, ರೇವಣ್ಣ ಆರೋಗ್ಯ ಸಹಜ ಸ್ಥಿತಿ ಮರಳುತ್ತಿದ್ದಂತೆ ರೇವಣ್ಣರನ್ನ ಡಿಸ್ಚಾರ್ಜ್ ಮಾಡಿಸಿ ಕಚೇರಿಗೆ ಕರೆದೊಯ್ದರು.