ಕೊಡಗು: ಎಸ್ಸೆಸ್ಸೆಲ್ಸಿ ಫಲಿತಾಂಶ ನಿನ್ನೆಯಷ್ಟೆ ಪ್ರಕಟವಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯದ ಬುನಾದಿ. ಮುಂದಿನ ಉಜ್ವಲ ಭವಿಷ್ಯ ಇಲ್ಲಿಂದ ಶುರು. ಇಂಥ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು, ಮುಂದಿನ ಓದಿನ ಬಗ್ಗೆ ಆ ವಿದ್ಯಾರ್ಥಿನಿ ತಲೆಕೆಡಿಸಿಕೊಂಡಿದ್ದಳು. ಆದರೆ ಕೊಲೆಗಾರ ಆ ವಿದ್ಯಾರ್ಥಿನಿಯ ತಲೆಯನ್ನೇ ಕತ್ತರಿಸಿದ್ದಾನೆ. ಇದು ಕೊಡಗು ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಸೋಮವಾರಪೇಟೆಯಲ್ಲಿ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ, ಆರೋಪಿಗಾಗಿ ಬಲೆ ಬೀಸಿದ್ದಾರೆ.
ಯು ಎಸ್ ಮೀನಾ ಕೊಲೆಯಾದ ವಿದ್ಯಾರ್ಥಿನಿ. ಸೂರ್ಲಬ್ಬಿ ವೈದ್ಯಕೀಯಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇದೇ ಗ್ರಾಮದ ನಿವಾಸಿ 30 ವರ್ಷದ ಓಮ್ಕಾರಪ್ಪ ಎಂಬಾತ ಕೊಲೆ ಮಾಡಿದ್ದಾನೆ. ಈ ಓಂಕಾರಪ್ಪನ ಜೊತೆಗೆ ಮೀನಾಳಿಗೆ ನಿಶ್ಚಿತಾರ್ಥ ಏರ್ಪಾಡು ಮಾಡಲಾಗಿತ್ತು. ಆದರೆ ಆಕೆ ಅಪ್ರಾಪ್ತ ಬಾಲಕಿಯಾಗಿದ್ದರಿಂದ ನಿಶ್ಚಿತಾರ್ಥ ನಿಲ್ಲಿಸಿದ್ದರು. ಇದರಲ್ಲೇ ಫಲಿತಾಂಶ ಕೂಡ ಬಂದಿದ್ದು, ಆರೋಪಿ ಒಮ್ಮಾಕಾರಪ್ಪ ಪೋಷಕರ ಎದುರೇ ಮೀನನ್ನು ಕರೆದೊಯ್ದು ಕೊಲೆ ಮಾಡಿದ್ದಾನೆ.
ಆರೋಪಿಯ ಜೊತೆಗೆ ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥ ನಿಶ್ಚಯಗೊಂಡಿದ್ದು ಸತ್ಯ ಎಂದು ಎಸ್ಪಿ ಕೆ.ರಾಮರಾಜನ್ ಖಚಿತಪಡಿಸಿದ್ದಾರೆ. ಆದರೆ ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಯುವತಿ 18 ತುಂಬುವ ತನಕ ಮದುವೆ ಮಾಡಬೇಡಿ ಎಂದು ಮನವೊಲಿಕೆ ಮಾಡಿದ್ದರಂತೆ. ಮದುವೆ ನಿಂತು ಹೋಯಿತಲ್ಲ ಎಂಬ ಕೋಪಕ್ಕೆ ಈ ರೀತಿ ಹತ್ಯೆ ಮಾಡಬಹುದೇ ಎಂಬ ಶಂಕೆ ಇದೆ. ಸದ್ಯ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.