ಚಿತ್ರದುರ್ಗ, ಮೇ : ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ ವಸತಿ ಶಾಲೆಗಳು 2023-24ನೇ ಸಾಲಿನ ಎಸ್‌ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.
ಒಟ್ಟು 1588 ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ-1ಕ್ಕೆ ಹಾಜರಾಗಿದ್ದು 1539 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ. 96.91% ಫಲಿತಾಂಶವನ್ನು ಸಾಧಿಸಲಾಗಿದೆ.
284 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 104 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 196 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 62 ವಿದ್ಯಾರ್ಥಿಗಳು ತೇರ್ಗಡೆ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
35 ವಸತಿ ಶಾಲೆಗಳ ಮೇಲ್ಭಾಗ 13 ವಸತಿ ಶಾಲೆಗಳು ಶೇ. 10 100 ಫಲಿತಾಂಶವನ್ನು ಸಾಧಿಸಬಹುದು. ಸಾರ್ವಜನಿಕ ಶಿಕ್ಷಣ ಇಲಾಖೆಯ ಫಲಿತಾಂಶ ವಿಶ್ಲೇಷಣೆಯ ಗುಣಮಟ್ಟ ಪರ್ಕಾಂಟೇಜ್ ನಲ್ಲಿ 34 ವಸತಿ ಶಾಲೆಗಳು ‘ಎ’ ಗ್ರೇಡ್ ಪಡೆದಿವೆ.
ಹಿರಿಯೂರಿನ ಜವಗೊಂಡನಹಳ್ಳಿ
ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ (ಪ.ಜಾತಿ-43),
ಇಲ್ಲಿನ ವಿದ್ಯಾರ್ಥಿನಿ ಕು|| ನವ್ಯಶ್ರೀ ಆರ್ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂ.ವರ್ಗ-35) ದೇವರಕೊಟ್ಟ, ಹಿರಿಯೂರು ತಾ|| ಇಲ್ಲಿನ ವಿದ್ಯಾರ್ಥಿ ಕು|| ಸಂಜಯ್ ಎಸ್ ರವರು 625 ಕ್ಕೆ 616 (ಶೇ 98.56%) ಅಂಕಗಳನ್ನು ಪಡೆದು ವಸತಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಶ್ರೀ ಮತಿ ಇಂದಿರಾಗಾಂಧಿ ವಸತಿ ಶಾಲೆ ಕಡ್ಲೆಗುದ್ದು
ಶೇಕವಾರು ಫಲಿತಾಂಶ:-97.82
ಒಟ್ಟು ವಿದ್ಯಾರ್ಥಿಗಳು :- 46
ಅತ್ಯುನ್ನತ ಶ್ರೇಣಿ:-08
ಪ್ರಥಮ ದರ್ಜೆ :- 32
ದ್ವಿತೀಯ ದರ್ಜೆ:-05
ಅನುತ್ತೀರ್ಣ:-01.
1. ಕೆಂಚಲಾ ಆರ್ 566 -90.56
2.ತರುಣ ನಾಯಕೆ ಎನ್ ಯು 560 – 89.56
3.ನವೀನ ಎ 555 – 88.8
4.ಅನುಷ ಎಂಟಿ 549 – 87.84
5.ಹೇಮಂತರಾಜ್ ಆರ್ 543 – 86.88
ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿ ಅತ್ಯುತ್ತಮವಾದ ವಸತಿ ಶಿಕ್ಷಣವನ್ನು ನೀಡುತ್ತವೆ ಎಂಬುದಕ್ಕೆ ನಿರ್ದರ್ಶನವಾಗಿದೆ, ಖಾಸಗಿ ಶಾಲೆಗಳು ವ್ಯಾಮೋಹನ ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳಿಗೆ ಸೇರಿಸುವಂತೆ ಕರೆ ಮತ್ತು ವಿದ್ಯಾರ್ಥಿಗಳನ್ನು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರನ್ನು ಪ್ರಾಂಶುಪಾಲರಾದ ರಮೇಶ ಆರ್ ಅಭಿನಂದಿಸಿದ್ದಾರೆ.
ಶಾಲಾ ವಸತಿ ವಿದ್ಯಾರ್ಥಿಗಳ ಈ ಸಾಧನೆಗೆ ವಿದ್ಯಾರ್ಥಿಗಳು ಪ್ರಾಂಶುಪಾಲರು ಮತ್ತು ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ಅಭಿನಂದನೆ ತಿಳಿಸಿರುವ ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಜಗದೀಶ್ ಹೆಬ್ಬಳ್ಳಿ ರವರು ಸರ್ಕಾರಿ ವಸತಿ ಶಾಲೆಗಳಲ್ಲಿ ಅತ್ಯುತ್ತಮ ಬೋಧಕ ಸಿಬ್ಬಂದಿ ವರ್ಗ, ಉಚಿತ ಊಟ-ವಸತಿ, ಪಠ್ಯಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್ ಮತ್ತು ಸಂಗೀತ ಶಿಕ್ಷಣ ಮುಂತಾದ ಸೌಲಭ್ಯಗಳನ್ನು ಒದಗಿಸುವ ತಮ್ಮ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೇ ವಸತಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಮೂಲಕ ಅತ್ಯುತ್ತಮ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪಡೆದುಕೊಳ್ಳಲು ಕರೆ ನೀಡಲಾಗಿದೆ.