Breaking
Wed. Dec 25th, 2024

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟ ಬಾಲಕಿಯರೇ ಮೇಲುಗೈ ಉಡುಪಿ ಮೊದಲ ಸ್ಥಾನ, ಯಾದಗಿರಿ  – ಕೊನೆ ಸ್ಥಾನ…!

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದೆ, 73.40 % ಫಲಿತಾಂಶ ಬಂದಿದೆ. ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಇವರ ಜೊತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್. 

ಪರೀಕ್ಷೆಯಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರ ಮೇಲೆ ಬಾಲಕರು – 2,87,416 (65.90%) ಹಾಗೂ ಬಾಲಕಿಯರು – 3,43,788 (81.11%) ಪಾಸ್‌ ಆಗಿದ್ದಾರೆ. 94% ಫಲಿತಾಂಶದೊಂದಿಗೆ ಉಡುಪಿ ಮೊದಲ ಸ್ಥಾನದಲ್ಲಿದೆ.

92.12% ದಕ್ಷಿಣ ಕನ್ನಡ ಹಾಗೂ 88.67% ಶಿವಮೊಗ್ಗ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ಯಾದಗಿರಿ  – 50.59% ಕೊನೆ ಸ್ಥಾನದಲ್ಲಿದೆ. 

ಫಲಿತಾಂಶದಲ್ಲಿನ ಕುಸಿತ
ಈ ಬಾರಿ ಎಸ್‌ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳ ಪ್ರತಿ ಕೊಠಡಿಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.

ಹೀಗಾಗಿ ಫಲಿತಾಂಶ ಕುಸಿತ ಕಂಡಿದೆ. 2022-23ನೇ ಸಾಲಿನಲ್ಲಿ 83.89% ಫಲಿತಾಂಶ ದಾಖಲಾಗಿದೆ. ಆದರೆ ಈ ಬಾರಿ 73.40% ಫಲಿತಾಂಶ ಬಂದಿದೆ.

100% ಫಲಿತಾಂಶ ವಿವರ
ಸರ್ಕಾರಿ – 785
ಅನುದಾನ – 206
ಖಾಸಗಿ ಶಾಲೆ – 1297
ಒಟ್ಟು – 2288.

ಶೂನ್ಯ ಸಾಧನೆ ಶಾಲೆಗಳು

ಸರ್ಕಾರಿ – 3

ಅನುದಾನ – 13

ಖಾಸಗಿ – 62

ಒಟ್ಟು – 78.  

 

Related Post

Leave a Reply

Your email address will not be published. Required fields are marked *