Breaking
Sun. Jan 12th, 2025

ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ….!

ಅತ್ಯಾಚಾರ ಆರೋಪ ಪ್ರಕರಣದಲ್ಲಿ ವಕೀಲ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಪ್ರಿನ್ಸಿಪಲ್‌ ಸಿ.ಜೆ‌, ಜೆಎಂಎಫ್‌ಸಿ ಜಡ್ಜ್ ಸಿದ್ದರಾಮ.ಎಸ್‌ ಆದೇಶ ಹೊರಡಿಸಿದ್ದಾರೆ. ಹೊಳೆನರಸೀಪುರದ ಜಡ್ಜ್ ನಿವಾಸದಲ್ಲಿ ಹಾಜರುಪಡಿಸಲಾಗಿತ್ತು. 

ನಿನ್ನೆ ಸಂಜೆ ಮತ್ತೆರೆಡು ಆಡಿಯೋ ರಿಲೀಸ್‌ ಮಾಡಿದ್ದ ದೇವರಾಜೇಗೌಡ, ವಿಡಿಯೋ ಕೂಡಾ ಹರಿ ಬಿಟ್ಟಿದ್ದರು. ಇದಾದ ಎಂಟೇ ನಿಮಿಷದಲ್ಲಿ ಮೊಬೈಲ್‌ ಲೋಕೇಶನ್‌ ಆಧಾರದಲ್ಲಿ ದೇವರಾಜೇಗೌಡನನ್ನ ನಿನ್ನೆ ರಾತ್ರಿ ಲಾಕ್‌ ಮಾಡಲಾಗಿತ್ತು. ಇವತ್ತು ಹೊಳೆನರಸೀಪುರದಲ್ಲಿ ತೀವ್ರ ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಗಿದೆ. ಆದರೆ ಆರೋಪ ತಳ್ಳಿಹಾಕಿರುವ ದೇವರಾಜೇಗೌಡ ಸತ್ಯಕ್ಕೆ ಜಯ ಸಿಗುತ್ತೆ ಎಂದಿದ್ದರು. 

ದೇವರಾಜೇಗೌಡ ವಿಚಾರಣೆಯೇ ಪೊಲೀಸರಿಗೆ ಸವಾಲ್ ಆಗಿದ್ದು, ಪೊಲೀಸರಿಗೆ ಮರುಪ್ರಶ್ನೆ ಹಾಕಿದ್ದಾರೆ. ಸಂತ್ರಸ್ತೆ ಮಾಡಿರುವ ಆರೋಪವನ್ನೇ ಮುಂದಿಟ್ಟು ಪ್ರಶ್ನೆ ಕೇಳ್ತಿದ್ರೂ, ಇದೊಂದು ವ್ಯವಸ್ಥಿತ ಹನಿಟ್ರ್ಯಾಪ್ ಅಂತಾ ವಾದಿಸಿದ್ದಾರಂತೆ. ಬೆಂಗಳೂರಿನಲ್ಲಿ ನಾನು ದೂರು ಕೊಟ್ಟ ಬಳಿಕ ನನ್ನ ಮೇಲೆ ಕೇಸ್ ಹಾಕಿದ್ದೀರಾ ಅಂತಾ ಪ್ರಶ್ನಿಸಿದ್ದಾರಂತೆ.

ದೇವರಾಜೇಗೌಡ ಬಂಧನಕ್ಕೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಇದೊಂದು ರಾಜಕೀಯ ಬಂಧನ ಎಂದಿರೋ ಬಿಜೆಪಿ ಕಲಿಗಳು, ಮತ್ತಷ್ಟು ಸಾಕ್ಷ್ಯಗಳು ಹೊರಬರುತ್ತೆಂಬ ಭಯದಿಂದ ದೇವರಾಜೇಗೌಡರನ್ನ ಬಂಧಿಸಿದ್ದಾರೆ ಅಂತಾ ಆರೋಪಿಸಿದ್ದಾರೆ.

ದೇವರಾಜೇಗೌಡ ಬಂಧನದ ಹಿಂದೆ ದೊಡ್ಡವರಿದ್ದಾರೆ. ರಾಜಕೀಯ ಬಂಧನ ಎಂಬ ಆರೋಪಕ್ಕೆ ಕೈ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್‌ ಮೇಲೇಕೆ ಗೂಬೆ ಕೂರಿಸೋದು ಅಂತಾ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ

Related Post

Leave a Reply

Your email address will not be published. Required fields are marked *