ಗದಗ, ಮೇ 11: ಪುಡಿ ರೌಡಿಗಳ ಅಟ್ಟಹಾಸಕ್ಕೆ ಆ ಕುಟುಂಬ ನಲುಗಿ ಹೋಗಿದೆ. ಹಾಡು ಹಗಲೇ ಮನೆಗೆ ನುಗ್ಗಿದ ಪುಡಿ ರೌಡಿಗಳ ಗ್ಯಾಂಗ್ ಮನೆಯಲ್ಲಿದ್ದ, ವಸ್ತುಗಳನ್ನು ಧ್ವಂಸ ಮಾಡಿದೆ. ಬೊಲೇರೋ ವಾಹನವನ್ನು ಸುಟ್ಟ ಅಟ್ಟಹಾಸ ಮೆರೆದಿದ್ದಾರೆ. ಅಷ್ಟೇ ಅಲ್ಲಾ ಮನೆಯಲ್ಲಿದ್ದ ಚಿನ್ನ, ನಗದು ದೋಚಿಕೊಂಡು, ಮಹಿಳೆಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಮಕ್ಕಳ ಜೊತೆಗೆ ಮಹಿಳೆ (woman) ಸ್ವಲ್ಪದರಲ್ಲಿ ಬಚಾವ್ ಆಗಿದ್ದಾರೆ. ಈ ಕೃತ್ಯದ ಹಿಂದೆ ಕಾಂಗ್ರೆಸ್ ಸದಸ್ಯನ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ಘಟನೆಯಿಂದ ಇಡೀ ನಗರ ಬೆಚ್ಚಿಬಿದ್ದಿದೆ.
ಗದಗ ಪಂಚಾಕ್ಷರಿ ನಗರದ ನಿವಾಸಿಯಾದ ಪ್ರಕಾಶ ನಿಡಗುಂಡಿ ಅವರ ಮನೆಗೆ ಪುಡಿ ರೌಡಿಗಳು ನುಗ್ಗಿ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ. ಪ್ರಕಾಶ ನಿಡಗುಂದಿ ಅವರ ಪತ್ನಿ ಕವಿತಾ, ಅವರ ಮಾವ ತಿಪ್ಪಣ್ಣ ಹಾಗೂ ಇಬ್ಬರು ಮಕ್ಕಳ ಜೊತೆಗೆ ಮನೆಯಲ್ಲಿದ್ದರು. ಹಾಡು ಹಗಲೇ ಐದು ಜನ ಗೂಂಡಾಗಳು ಏಕಾಏಕಿ ಮನೆಗೆ ಎಂಟ್ರಿ ನೀಡಿದ್ದಾರೆ. ಕೈಯಲ್ಲಿ ಚಾಕು, ಹಾಗೂ ಇಟ್ಟಿಗೆಯನ್ನು ಹಿಡಿದುಕೊಂಡು ಮನೆಗೆ ನುಗ್ಗಿದ್ದಾರೆ.
ಮನೆಯ ಒಳಗಡೆ ಬಂದ್ ಕೂಡಲೇ ಮನೆಯಲ್ಲಿದ್ದ ಟಿವಿಯನ್ನು ಒಡೆದು ಹಾಕಿದ್ದಾರೆ. ಫ್ರೀಡ್ಜ್ ಒಡೆದು, ಪ್ರಕಾಶ್ ಎಲ್ಲಿದ್ದಾನೆ ಎಂದು ಅವಾಜ್ ಹಾಕಿದ್ದಾರೆ. ಪ್ರಕಾಶ್ ಮನೆಯಲ್ಲಿ ಇಲ್ಲ ಎಂದ್ರು ಕವಿತಾಳ ಸೀರೆಯನ್ನು ಎಳೆದಾಡಿ, ಅವಳಿಗೆ ಚಾಕುವಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರಂತೆ. ಮಕ್ಕಳ ಜೊತೆಗೆ ರೂಂ ಬಾಗಿಲು ಹಾಕಿಕೊಂಡು ಕೂಗಾಡಿದ್ದಾಳೆ, ಅಕ್ಕಪಕ್ಕದ ಮನೆಯವರು ಬರ್ತಾಯಿದ್ದಂತೆ, ಐದು ಜನರ ಟೀಮ್ ಎಸ್ಕೇಪ್ ಆಗಿದೆ. ಹೀಗಾಗಿ ನಮಗೆ ಜೀವ ಭಯ ಇದೆ ಸೂಕ್ತವಾದ ರಕ್ಷಣೆ ನೀಡ್ಬೇಕು ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ.
ಪ್ರಕಾಶ ನಿಡಗುಂದಿ ಮನೆಯಲ್ಲಿ ಸಿಕ್ಕಿಲ್ಲಾ, ಅವರ ಬೋಲೆರೋ ವಾಹನ ವಿಂಡ್ ಪ್ಯಾನ್ ಕಂಪನಿಗೆ ಬಾಡಿಗೆ ಕೊಟ್ಟಿದ್ದಾರೆ. ಅಲ್ಲಿ ಇರಬಹುದು ಅಂತಾ ಅಲ್ಲಿಗೆ ಹೋಗಿದ್ದಾರೆ, ಅಲ್ಲಿ ವಾಹನ ಚಾಲಕ ಮಾತ್ರ ಇರೋದನ್ನು, ಕಂಡು ಚಾಲಕನು ಜೀಪ್ನಿಂದ ಇಳಿಸಿ, ಬೋಲೆರೋ ವಾಹನವನ್ನು ಸುಟ್ಟು ಹಾಕಿದ್ದಾರೆ. ಇನ್ನೂ ಪ್ರಕಾಶ್ ನಿಡಗುಂದಿ ಹಾಗೂ ಹುಯಿಲಗೋಳ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಮಿಲಿಂದ್ ಕಾಳೆ ನಡುವೆ ವ್ಯವಹಾರ ಇದೆಯಂತೆ. ಹೀಗಾಗಿ ಇಬ್ಬರ ನಡುವೆ ವೈಷಮ್ಯಯಿದೆ ಎಂದು ಪ್ರಕಾಶ ನಿಡಗುಂದಿ ಅವರ ಸಹೋದರ ಶಂಕರ ನಿಡಗುಂದಿ ಆರೋಪ ಮಾಡ್ತಾಯಿದ್ದಾರೆ.
ಹಾಡು ಹಗಲೇ ಮನೆಗೆ ನುಗ್ಗಿ ಗಲಾಟೆ ಮಾಡಿರೋದರಿಂದ ಇಡೀ ಗದಗ ಬೆಟಗೇರಿ ಅವಳಿ ನಗರ ಬೆಚ್ಚಿ ಬಿದ್ದಿದೆ. ಪೊಲೀಸರ ಭಯ ಇಲ್ಲದೆ ಪುಡಿ ರೌಡಿಗಳ ಅಟ್ಟಹಾಸ ಮೆರೆಯುತ್ತಿದ್ದಾರೆ. ಇನಾದರೂ ಇಂತಹ ಪುಡಿ ರಾಜಕಾರಣಿಗಳು ಹಾಗೂ ಪುಡಿ ರೌಡಿಗಳ ಗ್ಯಾಂಗ್ ಬಿಸಿ ಮುಟ್ಟಿಸುವ ಕೆಲಸವನ್ನು ಪೊಲೀಸರು ಮಾಡ್ಬೇಕಾಗಿದೆ.