ಬೆಂಗಳೂರು: ನಗರದ ಹಲವೆಡೆ ಮಳೆ ಅಬ್ಬರ ಜೋರಾಗಿದೆ. ಆರ್.ಆರ್. ನಗರ ಜ್ಞಾನಭಾರತಿ, ಏಪೋರ್ಟ್ ರಸ್ತೆ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿದಿದೆ.
ಮಳೆಯ ಅಬ್ಬರಕ್ಕೆ ತಡರಾತ್ರಿ ನಗರ ವಾಸಿಗಳು ಹೈರಾಣಾಗಿದ್ದಾರೆ. ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅನ್ನಪೂರ್ಣೇಶ್ವರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನಿದ್ದೆಯಿಲ್ಲದೇ ಸ್ಥಳೀಯರು ರಾತ್ರಿಯೆಲ್ಲ ನೀರನ್ನು ಹೊರಹಾಕುವ ಕೆಲಸ ಮಾಡಿದರು. ಮನೆಯ ವಸ್ತುಗಳೆಲ್ಲ ಮಳೆಗೆ ತೊಯ್ದಿವೆ.
ನಗರದ ಎಲ್ಲೆಲ್ಲಿ ಎಷ್ಟೆಷ್ಟು ಮಳೆ ?
ಕೆಂಗೇರಿ – 89 ಮಿಮೀ.
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ – 62 ಮಿಮೀ
ನಾಯಂಡನಹಳ್ಳಿ – 61.5 ಮಿಮೀ
ಹೆಮ್ಮಿಗೆಪುರ – 61 ಮಿಮೀ
ಆರ್.ಆರ್. ನಗರ – 60 ಮಿಮೀ
ಮಾರುತಿ ಮಂದಿರ – 51.50 ಮಿಮೀ
ವಿದ್ಯಾಪೀಠ – 50 ಮಿಮೀ
ಉತ್ತರಹಳ್ಳಿ – 42 ಮಿಮೀ
ಹಂಪಿನಗರ – 39 ಮಿಮೀ
ಯಲಹಂಕ – 38.50 ಮಿಮೀ
ಜಕ್ಕೂರು – 38 ಮಿಮೀ
ಕೊಟ್ಟಿಗೆಪಾಳ್ಯ – 33 ಮಿಮೀ
ಕೊಡಿಗೆಹಳ್ಳಿ – 28.50 ಮಿಮೀ
ನಂದಿನಿ ಲೇಔಟ್ – 28 ಮಿಮೀ