Breaking
Tue. Dec 24th, 2024

ಮಹಿಳೆಯೊಬ್ಬರು 12 ರಿಂದ 13 ವರ್ಷ ವಯಸ್ಸಿನ ಹುಡುಗನೊಂದಿಗೆ ವಿವಾಹವಾಗಿದ್ದಾರೆ. ವಿಡಿಯೋ ವೈರಲ್….!

ದೇಶದಲ್ಲಿ ಬಾಲ್ಯ ವಿವಾಹವನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ಕೂಡಾ ಅಲ್ಲೊಂದು, ಇಲ್ಲೊಂದು ಕಡೆ ಬಾಲ್ಯ ವಿವಾಹದ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು 12 ರಿಂದ 13 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕನನ್ನು ಮದುವೆಯಾಗಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಮದುವೆ ಸೀಸನ್ ಶುರುವಾಗಿಬಿಟ್ಟಿದೆ. ಈಗಂತೂ ಎಲ್ಲಿ ನೋಡಿದ್ರೂ ಮದುವೆಗಳದ್ದೇ ಸುದ್ದಿ. ನಮ್ಮ ಭಾರತದಲ್ಲಿ ಮದುವೆಯಾಗಲೂ ವಯಸ್ಸಿನ ಮಿತಿ ಇದ್ದು, 18-21 ವರ್ಷ ತುಂಬದ ಹೊರತು ಯಾರೂ ಮದುವೆಯಾಗುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಬಾಲ್ಯ ವಿವಾಹ ಸಂಖ್ಯೆ ಕುಸಿತಗೊಂಡಿವೆಯಾದರೂ, ಐವರಲ್ಲಿ ಒ ಆರರಲ್ಲಿ ಓರ್ವ ಹುಡುಗ ಇನ್ನೂ ಕೂಡಾ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಇದಕ್ಕೆ ಸೂಕ್ತ ನಿದರ್ಶನವೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಮಹಿಳೆಯೊಬ್ಬರು 12 ರಿಂದ 13 ವರ್ಷ ವಯಸ್ಸಿನ ಹುಡುಗನೊಂದಿಗೆ ವಿವಾಹವಾಗಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಈ ವಿಡಿಯೋವನ್ನು ದಿವ್ಯಾ (@divya_gandotra) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ರಾಜಸ್ಥಾನದ ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡಿ “ರಾಜಸ್ಥಾನದಲ್ಲಿ ಇನ್ನೂ ಬಾಲ್ಯವಿವಾಹಗಳು ಬಹಿರಂಗವಾಗಿ ನಡೆಯುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಯಾವ ಕ್ರಮ ತೆಗೆದುಕೊಳ್ಳುತ್ತೀರಾ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ರಾಜಸ್ಥಾನದ ಊರಿನಲ್ಲೊಂದು ಮಹಿಳೆಯೊಬ್ಬರು 12-13 ವರ್ಷ ವಯಸ್ಸಿನ ಹುಡುಗನನ್ನು ಮದುವೆಯಾಗುತ್ತಿರುವ ದೃಶ್ಯವನ್ನು ಕಾಣಬಹುದು. ಮೊದಲಿಗೆ ಆ ಅಪ್ರಾಪ್ತ ಹುಡುಗ ವಧುವಿನ ಕೊರಳಿಗೆ ಹಾರವನ್ನು ಹಾಕುತ್ತಾನೆ. ನಂತರ ಆತ ಮಂಡಿಯೂರಿ ಕುಳಿತು ವಧುವಿನ ಕೈಯಿಂದ ತನ್ನ ಕೊರಳಿಗೆ ಹೂವಿನ ಹಾರವನ್ನು ಹಾಕಿಸಿಕೊಳ್ಳುವಂತಹ ದೃಶ್ಯವನ್ನು ಕಾಣಬಹುದು.

ಮೇ 09 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಹೆಚ್ಚಿನವರು ಈ ವಿಡಿಯೋ ಬರೀ ರೀಲ್ಸ್ ಗಾಗಿ ಮಾತ್ರ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನೂ ಹಲವರು ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Related Post

Leave a Reply

Your email address will not be published. Required fields are marked *