ಕನ್ನಡದ ‘ಹೆಡ್‌ಬುಷ್’ ಚಿತ್ರದ ಮೂಲಕ ಪರಿಚಿತರಾದ ಸೌತ್ ಬ್ಯೂಟಿ ಪಾಯಲ್ ರಜಪೂತ್ ಈಗ ಖಾಕಿ ಖದರ್ ತೋರಿಸೋಕೆ ರೆಡಿಯಾಗಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ರಕ್ಷಣೆಗಿಳಿದಿದ್ದಾರೆ. ಚಿತ್ರದಲ್ಲಿನ ನಟಿಯ ಫಸ್ಟ್ ಲುಕ್ ಈಗ ರಿವೀಲ್ ಆಗಿದೆ.
ರಕ್ಷಣಾ’ ಎಂಬ ಚಿತ್ರದಲ್ಲಿ ಪಾಯಲ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಹರಿಪ್ರಿಯಾ ಕ್ರಿಯೇಷನ್ಸ್ ಅಡಿಯಲ್ಲಿ ಪ್ರಣದೀಪ್ ಠಾಕೂರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರದಲ್ಲಿ ಪಾಯಲ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.
ಆರ್‌ಎಕ್ಸ್ 100, ‘ಮಂಗಳವಾರಂ’ ಚಿತ್ರಗಳಿಗಿಂತ ಪಾಯಲ್ ಈ ಸಿನಿಮಾದಲ್ಲಿ ವಿಭಿನ್ನವಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಸಕ್ಸಸ್ ಸಿಗಲಿದೆ ಎಂಬ ಭರವಸೆಯಲ್ಲಿದೆ ಚಿತ್ರತಂಡ. ಅಂದಹಾಗೆ, ಡಾಲಿ ನಟನೆ ಮತ್ತು ನಿರ್ಮಾಣದ ‘ಹೆಡ್‌ಬುಷ್’ ಚಿತ್ರದಲ್ಲಿ ಪಾಯಲ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು.