Breaking
Wed. Dec 25th, 2024

ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ನಟಿ ಪವಿತ್ರ ಜಯರಾಂ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ…!

ಬೆಂಗಳೂರು : ಕನ್ನಡ ಹಾಗೂ ತೆಲುಗಿನ ಜನಪ್ರಿಯ ಕಿರುತೆರೆ ನಟಿ ಪವಿತ್ರ ಜಯರಾಂ ಅವರು ವಿಧಿವಶರಾಗಿದ್ದಾರೆ. ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ನಡೆದ ಭೀಕರ ಅಪಘಾತದಲ್ಲಿ ನಟಿ ಪವಿತ್ರ ಜಯರಾಂ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರಾದ ಪವಿತ್ರ ಜಯರಾಂ ಅವರು, ಕನ್ನಡದ ರೋಬೋ ಫ್ಯಾಮಿಲಿಯಲ್ಲಿ ಕಿರುತೆರೆ ಪ್ರಯಾಣ ಆರಂಭಿಸಿದ್ದರು. ಕನ್ನಡದಲ್ಲಿ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಪಡೆದ ಬಳಿಕ ತೆಲುಗಿನ ಧಾರಾವಾಹಿಯತ್ತ ಮುಖ ಮಾಡಿದ್ದರು.  ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ನಟಿಸುತ್ತಿದ್ದ ನಟಿ ಪವಿತ್ರ ಜಯರಾಂ, ತೆಲುಗಿನ ಇತರ ಧಾರವಾಹಿಗಳಲ್ಲಿಯೂ ನಟಿಸುತ್ತಿದ್ದರು. ಇಂದು ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ನಟಿ ಪವಿತ್ರ ಜಯರಾಂ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಪವಿತ್ರಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ಸಂಪೂರ್ಣ ಜಖಂ ಆಗಿದೆ. ಸದ್ಯ ಪವಿತ್ರಾ ಜಯರಾಂ ಅವರ ಮೃತದೇಹವನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದ್ದು, ನಾಳೆ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ರವಾನೆ ಮಾಡಲಾಗುತ್ತಿದೆ. ಬಳಿಕ ಮಂಡ್ಯದ ಹುಟ್ಟೂರಿಗೆ ಮೃತದೇಹ ತಲುಪಲಿದೆ ಎನ್ನುವ ಸದ್ಯದ ಮಾಹಿತಿ ಲಭ್ಯವಾಗಿದೆ.

Related Post

Leave a Reply

Your email address will not be published. Required fields are marked *