ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಯುಐ’ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಇದರ ನಡುವೆ ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ್ದ ‘ಎ’ ಚಿತ್ರವನ್ನು ಮರು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
1998ರಲ್ಲಿ ರಿಲೀಸ್ ಆದ ‘ಎ’ ಸಿನಿಮಾಗೆ ಅಂದು ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮೂರು ಜನ ಹೀರೋಯಿನ್‌ಗಳ ಜೊತೆ ಉಪೇಂದ್ರ ಡ್ಯುಯೇಟ್ ಹಾಡಿದ್ದರು. ಉಪೇಂದ್ರ ಬರೆದ ಕಥೆಗೆ ಮತ್ತು ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು.
ಇದೀಗ ಇದೇ ಮೇ 17ಕ್ಕೆ ‘ಎ’ ಸಿನಿಮಾ ಮಾಡಲು ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಯುಐ ಸಿನಿಮಾಗಾಗಿ ಕಾದು ಕುಳಿತವರಿಗೆ ‘ಎ’ ಚಿತ್ರದ ಅಪ್‌ಡೇಟ್ ಸಿಕ್ಕಿದೆ. ಮತ್ತೆ ಉಪೇಂದ್ರ ಫಾರ್ಮುಲಾ ಮತ್ತೆ ವರ್ಕೌಟ್ ಆಗುತ್ತಾ? ಎಂದು ಕಾಯಬೇಕಿದೆ.
ಅಂದಹಾಗೆ, ಉಪೇಂದ್ರ ನಟಿಸಿ, ನಿರ್ದೇಶಿಸಿದ ‘ಎ’ ಸಿನಿಮಾದಲ್ಲಿ ಪ್ರೇಮ, ರವೀನಾ ಟಂಡನ್, ದಾಮಿನಿ ನಾಯಕಿಯರಾಗಿ ನಟಿಸಿದ್ದರು. ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದರು.