ಬೆಂಗಳೂರು, ಮೇ 13: ಕಳೆದ ಮೂರು ದಿನಗಳಿಂದ ನಿರಂತರವಾಗಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಮಳೆಯಾಗುತ್ತಿದೆ . ಇಂದು ಕೂಡ ನಗರದಲ್ಲಿ ಮಳೆ ಶುರುವಾಗಿದ್ದು, ಕೋರಮಂಗಲ, ಶಾಂತಿನಗರ, ಆಡುಗೋಡಿ, ವಿಲ್ಸನ್ ಗಾರ್ಡನ್, ಕೆ.ಆರ್.ಮಾರ್ಕೆಟ್, ಲಾಲ್ಬಾಗ್, ಕಾರ್ಪೊರೇಷನ್, ಮೈಸೂರು ರಸ್ತೆ ,ಟೌನ್ ಹಾಲ್, ಮೆಜೆಸ್ಟಿಕ್, ಜೆ.ಸಿ.ರೋಡ್ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ವಾಹನ ಸವಾರರು ಪರದಾಡಿದ್ದಾರೆ.