Breaking
Thu. Dec 26th, 2024

ಮಂಗಳವಾರ ನಾಮಪತ್ರ ಸಲ್ಲಿಸಿರುವ ಪ್ರಧಾನಿ ಮೋದಿ  ಇಂದೇ ಸ್ವಕ್ಷೇತ್ರ ವಾರಣಾಸಿಗೆ…!

ಲಕ್ನೋ: ಮಂಗಳವಾರ ನಾಮಪತ್ರ ಸಲ್ಲಿಸಿರುವ ಪ್ರಧಾನಿ ಮೋದಿ  ಇಂದೇ ಸ್ವಕ್ಷೇತ್ರ ವಾರಣಾಸಿಗೆ  ತೆರಳಿದ್ದು, ಭರ್ಜರಿ ರೋಡ್ ಶೋ  ಸ್ಥಳ. ಮಾಳವೀಯ ವೃತ್ತದಿಂದ ಆರಂಭವಾದ ರೋಡ್ ಶೋ ಕಾಶಿ ವಿಶ್ವನಾಥ ಧಾಮದವರೆಗೂ 6 ಕಿಲೋಮೀಟರ್ ಉದ್ದ.

ಸಂತ ರವಿದಾಸ್ ಗೇಟ್, ಅಸ್ಸಿ ಘಾಟ್, ಶಿವಲೀಲಾ ಘಾಟ್, ಸೋನಾರ್‌ಪುರ, ಜಂಗಮವಾಡಿ, ಗೋದೌಲಿಯಾವನ್ನು ಮೋದಿ ರೋಡ್ ಶೋ ಹಾದು ಹೋಯ್ತು. 1200 ವರ್ಷಗಳ ಹಿಂದೆ ಶಂಕರಾಚಾರ್ಯರು  ಇದೇ ರಸ್ತೆಯಲ್ಲಿ ಇದ್ದರು ಎಂಬ ಪ್ರತೀತಿ ಇದೆ. ಮೋದಿ ಸಾಗಿದ ರಸ್ತೆಯಲ್ಲಿ 25 ದೇವಸ್ಥಾನಗಳು, 60ಕ್ಕೂ ಹೆಚ್ಚು ಆಶ್ರಮಗಳಿದ್ದು, ದಾರಿಯ ಸಾವಿರಾರು ಮಂದಿ ಮೋದಿಗೆ ಹೂಮಳೆಯ ಸ್ವಾಗತ.  ಬಿಸ್ಮಿಲ್ಲಾ ಖಾನ್ ಕುಟುಂಬದ ಶಹನಾಯಿ ವಾದನವೂ ಇತ್ತು.

ಕಲಾ ತಂಡಗಳ ವೈಭವವೂ ಕಂಡು. 5000ಕ್ಕೂ ಹೆಚ್ಚು ಮಹಿಳೆಯರು, ಗುಜರಾತಿಗಳು, ಮರಾಠಿಗಳು, ಬೆಂಗಾಲಿಗಳು, ತಮಿಳರು, ಪಂಜಾಬಿಗಳು. ಹೀಗೆ ದೇಶದ ಎಲ್ಲಾ ಭಾಗದ ಮಂದಿ ಮೋದಿ ರೋಡ್ಶೋನಲ್ಲಿ ಕಾಣಿಸಿಕೊಂಡರು.

ಜನರ ಪ್ರತಿಕ್ರಿಯೆ ನೋಡಿ ಪ್ರಧಾನಿ ಮೋದಿ ಫುಲ್ ಖುಷಿಯಾದರು. ಜನರತ್ತ ಕೈಬೀಸಿ, ಕಮಲದ ಚಿನ್ಹೆಯನ್ನು ತೋರಿಸಿದರು. ರೋಡ್‌ಶೋನಲ್ಲಿ ಮೋದಿ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಸೇರಿದ್ದಾರೆ. ರೋಡ್ ಶೋ ಅಂತ್ಯವಾದ ಬಳಿಕ ಕಾಶಿ ವಿಶ್ವೇಶ್ವರನಿಗೆ ಮೋದಿ ಪೂಜೆ ಸಲ್ಲಿಸಿದರು. 10 ವರ್ಷದ ವಾರಣಾಸಿ ಹೇಗೆ ಬದಲಾಗಿದೆ ಎಂದು ಲೇಸರ್ ಶೋ ಮೂಲಕ ಪ್ರಸ್ತುತಪಡಿಸಲಾಗಿದೆ. 

ಮಂಗಳವಾರ ಯಾಕೆ ?   ನಾಳೆ ಗಂಗಾ ಸಪ್ತಮಿ. ಹಿಂದೂಗಳ ಪಾಲಿಗೆ ಪವಿತ್ರವಾದ ದಿನ. ಈ ದಿನ ಬ್ರಹ್ಮನ ಕಮಂಡಲದಿಂದ ಗಂಗೆ ಜನಿಸಿದಳು ಎಂಬ ನಂಬಿಕೆಯಿದೆ. ಗಂಗಾ ಸಪ್ತಮಿಯಂದು ಶುಭ ಅಭಿಜಿನ್ ಲಗ್ನದಲ್ಲಿ ಮೋದಿ ನಾಮಪತ್ರ ಸಲ್ಲಿಸುವುದು ಶ್ರೇಯಸ್ಕರ ಎಂದು ಪಂಡಿತ್ ಗಣೇಶ್ವರ್ ಶಾಸ್ತ್ರಿ ಸೂಚಿಸಿದ ನಾಮಪತ್ರ ಸಲ್ಲಿಸುತ್ತಿದ್ದಾರೆ. ರಾಮಮಂದಿರ ಲೋಕಾರ್ಪಣೆಗೆ ಮಹೂರ್ತವನ್ನು ಇವರೇ ನೀಡಿದ್ದರು.

Related Post

Leave a Reply

Your email address will not be published. Required fields are marked *