Breaking
Wed. Dec 25th, 2024

ಎಸ್.ಆರ್.ಎಸ್. ಹೆರಿಟೇಜ್ ಶಾಲೆಯು ಸತತ 7ನೇ ವರ್ಷವೂ ಶೇಕಡ 100% ಫಲಿತಾಂಶ..!

ಚಿತ್ರದುರ್ಗ, ಮೇ. 13 : ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಸ್.ಆರ್.ಎಸ್. ಹೆರಿಟೇಜ್ ಶಾಲೆಯು ಸತತ 7ನೇ ವರ್ಷವೂ 2023-24ನೇ ಸಾಲಿನ ಸಿ.ಬಿ.ಎಸ್.ಈ 10ನೇ ತರಗತಿಯ ಫಲಿತಾಂಶದಲ್ಲಿ ಶೇಕಡ 100% ಫಲಿತಾಂಶ ಸಾಧಿಸಿದೆ. 

ಈ ಬಾರಿ ಶಾಲೆಯ ವಿದ್ಯಾರ್ಥಿಗಳಾದ ಜೀವನ್ ಜಿ. ಎಸ್. (96.6%), ಮೋನಿಕ ಎಸ್. (95.6%) ಮತ್ತು ಗಂಗೋತ್ರಿ (95%) ಇವರುಗಳು ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಒಟ್ಟು 116 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು (90% ಕ್ಕಿಂತ ಹೆಚ್ಚು) ಪಡೆದಿದ್ದಾರೆ. 

ಈ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು ಶ್ರೀ ಬಿ.ಎ. ಲಿಂಗಾರೆಡ್ಡಿ, ಕಾರ್ಯದರ್ಶಿ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಧ್ಯಾಕ್ಷರು ಅಮೋಘ್ ಬಿ. ಎಲ್. ಡಾ|| ರವಿ ಟಿ.ಎಸ್. ಸಂಸ್ಥೆಯ ಆಡಳಿತಾಧಿಕಾರಿಗಳು, ಪ್ರಭಾಕರ್. ಎಂ. ಎಸ್, ಪ್ರಾಂಶುಪಾಲರು, ಬಿ.ವಿ ರಾಕೇಶ್ ಸಂಯೋಜಕರು ಹಾಗೂ ಶಾಲೆಯ ಶಿಕ್ಷಕವೃಂದ ಮಕ್ಕಳಿಗೆ ಹಾಗೂ ಪೋಷಕರಿಗೆ ಶುಭಾಶಯ ತಿಳಿಸಿದ್ದಾರೆ. 

Related Post

Leave a Reply

Your email address will not be published. Required fields are marked *