ಚಿತ್ರದುರ್ಗ ಮೇ. 13 : ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘ (ರಿ.) ಇವರ ವತಿಯಿಂದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ 2023-24 ಶಿಕ್ಷಣ ಪಡೆದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಶ್ರೇಣಿಯಲ್ಲಿ (ಶೇ. 85ಕ್ಕೂ ಹೆಚ್ಚು ಅಂಕಗಳಿಸಿ) ಉತ್ತರರಾದ ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮಕ್ಕಳಿಗೆ ಮಾತ್ರ ಈ ಪ್ರತಿಭಾ ಪುರಸ್ಕಾರವನ್ನು ಆಯೋಜಿಸಲಾಗಿದೆ ಎಂದು ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಶ್ರೀಮತಿ ಗಾಯತ್ರಿ ಶಿವರಾಂ ಅವರು ಪ್ರಾರಂಭಿಸಿದರು.
ಅರ್ಹ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ಪಾಸ್ ಪೋರ್ಟ್ ಆಳತೆಯ ಪೋಟೋ, ದೂರವಾಣಿ ಸಂಖ್ಯೆ ಮತ್ತು ಅಂಕಪಟ್ಟಿಯನ್ನು 15-05-2024 ಸಂಪರ್ಕಿಸಿ, ವಿವರಗಳನ್ನು ತಲುಪಿಸಲು ಕೋರಿದೆ. ಯಾವುದೇ ವಿಷಯದಲ್ಲಿ ಶೇಕಡ 100 ಅಂಕಗಳಿಸಿದ ವಿಶೇಷ ಬಹುಮಾನ ನೀಡಲಾಯಿತು.
ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾದ ಜೆ. ಪರಶುರಾಮ ಇವರ ಉಪಸ್ಥಿತಿಯಲ್ಲಿ ಹಾಗೂ ಸಂಘದ ಅಧ್ಯಕ್ಷರಾದ ಜಿ.ಆರ್. ಪ್ರತಾಪರೆಡ್ಡಿ ಅವರ ಅಧ್ಯಕ್ಷತೆಯಲ್ಲಿ 26-05-2024 ವಿದ್ಯಾನಗರದ ವೀರಸಾವರ್ಕರ್ ಪಾರ್ಕ್‌ನ ಶ್ರೀ ವಿದ್ಯಾಗಣಪತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಸಕಾಲಕ್ಕೆ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿನಂತಿಸಿದ್ದಾರೆ.