Breaking
Wed. Dec 25th, 2024

ಸರ್ಕಾರದಿಂದ ದಲಿತರಿಗೆ ಮಂಜೂರಾದ ಭೂಮಿಯನ್ನು ಹಸ್ತಾಂತರಿ ಸುವರೆಗೂ ಅನಿರ್ದಿಷ್ಠಾವಧಿ ಆಹೋರಾತ್ರಿ ದರಣಿ….!

ಭದ್ರಾವತಿ : ದಲಿತರ ಭೂಮಿಯನ್ನು ಎಂಪಿಎಂ ನವರು ಆಕ್ರಮಿಸಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ಆಹೋರಾತ್ರಿ ಧರಣಿ ಆರಂಭಿಸಲಾಗಿದೆ. 

ಹೊಳೆಹೊನ್ನೂರು ಸಮೀಪದ ಚಂದನಕೆರೆ ಗ್ರಾಮದ ಸರ್ವೆ ನಂ. 12/ಎ ಬ್ಲಾಕ್ ನಲ್ಲಿ ಸುಮಾರು 28 ಭೂಮಿಯನ್ನು ಅರದೋಟ್ಲು ಗ್ರಾಮದ 14 ಜನರಿಗೆ 1960-61ರಲ್ಲಿ ದಲಿತರಿಗೆ ಸಾಗುವಳಿ ನೀಡಿದ್ದು, ಇದರಲ್ಲಿ ಹತ್ತಿ, ಹುರುಳಿ, ಮೆಕ್ಕೆಜೋಳ ಬೆಳೆಗಳನ್ನು ಬೆಳೆಯಲಾಗಿದೆ ಎಂದು ತಹಸೀಲ್ದಾರ್ ಸ್ಥಳ ಪರಿಶೀಲನೆ ಮಾಡಿ ದೃಡೀಕರಿಸಲಾಗಿದೆ.

ದಲಿತರು 1985-86ರವರೆಗೆ ಸಾಗುವಳಿ ಮಾಡುತ್ತಾ ಬಂದಿದ್ದು, ಕೆಲ ವರ್ಷಗಳ ನಂತರ ಅನಕ್ಷರಸ್ತ ಹಾಗೂ ಅಸಹಾಯಕ ದಲಿತರನ್ನು ಹೆದರಿಸಿ ದೌರ್ಜನ್ಯದಿಂದ ಎಂಪಿಎಂ ನವರು ನೀಲಗಿರಿ ನೆಡುತೋಪು ಮಾಡಿ. ದಲಿತರು ಭೂಮಿಯ ಮೇಲೆ ಹೋಗದಂತೆ ಮಾಡಿದ್ದಾರೆ. ಇದರ ವಿರುದ್ದ ಸರ್ಕಾರದ ಜೊತೆ ಹಲವಾರು ಬಾರಿ ಪತ್ರ ವ್ಯವಹಾರ ಮಾಡುತ್ತಲೇ ಬರುತ್ತಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಿಲ್ಲ.

ದಿನನಿತ್ಯ ಕಚೇರಿಗೆ ಅಲೆದಾಡುವುದೆ ಜೀವನವಾಗಿಯೇ. ಸಂಬಂಧಪಟ್ಟ ಅಧಿಕಾರಿಗಳು ಆಗಮಿಸಿ ಜಂಟಿ ಸರ್ವೇ ಕಾರ್ಯ ನಡೆಸಿ, ಸರ್ಕಾರದಿಂದ ದಲಿತರಿಗೆ ಮಂಜೂರಾದ ಹಸ್ತಾಂತರಿ ಸುವರೆಗೂ ಅನಿರ್ದಿಷ್ಠಾವಧಿ ಆಹೋರಾತ್ರಿ ದರಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಸರ್ಕಾರದಿಂದ ನೀಲಿಗಿರಿ ಮರ ಬೆಳೆಯುವುದನ್ನು ನಿಷೇಧಿಸಿದ್ದರು

ಈ ಸಂದರ್ಭದಲ್ಲಿ ಗ್ರಾಮಾಂತರ ಸಂಚಾಲಕರಾದ ಹನುಮಂತಪ್ಪ, ನವೀನ್ ಕುಮಾರ್, ದೇವರಾಜ್, ಮಲ್ಲೇಶ್, ರಂಗಪ್ಪ, ದೇವರಾಜ, ಹರೀಶ್, ಸಂಗನಾಥ, ಪರಮೇಶ್, ಧನಂಜಯ, ಚೌಡಪ್ಪ, ಹನುಮಂತಪ್ಪ, ಮಂಜಪ್ಪ, ರತ್ನಮ್ಮ ಸೇರಿದಂತೆ ಇತರರು ಇದ್ದರು.

Related Post

Leave a Reply

Your email address will not be published. Required fields are marked *