ಬೆಂಗಳೂರು, ಮೇ 14: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ ನಿಜ. ಆದರೆ, ಅದಕ್ಕೂ ಮುನ್ನ ಬಿಸಿಲಿನ ಪ್ರಮಾಣ ಸಿಕ್ಕಾಪಟ್ಟೆ ಜಾಸ್ತಿಯಾಗಿತ್ತು. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಪ್ರತಿ ತರಕಾರಿ ದರ ಕೆಜಿಗೆ ಸುಮಾರು 20 ರೂಪಾಯಿಗಳಷ್ಟು ಏರಿಕೆಯಾಗಿದೆ. ಬಿಸಿಲಿನ ಪ್ರಮಾಣ ಹೆಚ್ಚಾಗಿ ಇದರಿಂದ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ವ್ಯಾಪಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ, ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಯಾವ ತರಕಾರಿಗೆ ಎಷ್ಟಿದೆ ದರ?
ತರಕಾರಿ – ಬೆಲೆ (ಕೆಜಿಗೆ ರೂ.ಗಳಲ್ಲಿ)
ಕ್ಯಾರೇಟ್ – 95
ಬೀನ್ಸ್ – 220
ನವಿಲುಕೋಸು – ೮೦
ಬದನೆಕಾಯಿ – 70
ದಪ್ಪ ಮೆಣಸಿನಕಾಯಿ – ೮೦
ಬಟಾಣಿ – 200
ಬೆಂಡೆಕಾಯಿ – 80
ಟೊಮೆಟೋ – 35
ಆಲೂಗೆಡ್ಡೆ- 49
ಹಾಗಲಕಾಯಿ – 80
ಸೋರೆಕಾಯಿ – ೫೨
ಬೆಳ್ಳುಳ್ಳಿ – 320
ಶುಂಠಿ – 195
ಪಡವಲಕಾಯಿ – 47
ಗೋರಿಕಾಯಿ – 64
ಹಸಿರುಮೆಣಸಿಕಾಯಿ – 110
ಬಿಟ್ರೋಟ್ – 46
ಈರುಳ್ಳಿ – 40 ಕೆಜಿ
ಇದು ಸೋಮವಾರ ಮಾರಾಟವಾದ ತರಕಾರಿಗಳ ಬೆಲೆ. ಕಳೆದ ವಾರ ಸೌತೆಕಾಯಿ ಹಾಗೂ ನಿಂಬೆಹಣ್ಣು ಬೆಲೆ ಏರಿಕೆಯಾಗಿದೆ. ಬೇರೆ ತರಕಾರಿಗಳ ಬೆಲೆ 60 ರೂ. ಒಳಗೆಯೇ ಇತ್ತು. ಆದರೆ ಈ ವಾರ ಬೀನ್ಸ್, ಕ್ಯಾರೇಟ್, ಬದನೆಕಾಯಿ, ಹಸಿರುಮೆಣಸಿನಕಾಯಿ, ಟೋಮಾಟೋ, ಬಟಾಣಿ, ಬೆಳ್ಳುಳ್ಳಿ ಸತತವಾಗಿ ಏರಿಕೆಯಾಗುತ್ತಿದೆ. ಸದ್ಯ ಒಂದು ವಾರದಿಂದ ಮಳೆಯಾಗುತ್ತಿದೆ. ಮಳೆ ಬಂದರೆ ಟೋಮೆಟೋ ಹಾಗೂ ಈರುಳ್ಳಿ ಬೆಲೆ ಏರಿಕೆಯಾಗಿದೆ. ಮಳೆ ಬಂದಿಲ್ಲ ಅಂದರೆ ತರಕಾರಿಗಳ ಬೆಲೆ ಏರಿಕೆಯಾಗುತ್ತೆ. ಮುಂದಿನವಾರ ತರಕಾರಿಗಳ ಬೆಲೆ ಕೊಂಚ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.