Breaking
Wed. Dec 25th, 2024

ಹಿಲ್ ಗಾರ್ಡನ್ ಕಛೇರಿಯಲ್ಲಿ ಶ್ರೀ ಮಹರ್ಷಿ ಭಗೀರಥ ಮಹಾರಾಜರ ಜಯಂತಿ ಆಚರಣೆ…!

ಗೋಕಾಕ : ಹಿಲ್ ಗಾರ್ಡನ್ ಕಛೇರಿಯಲ್ಲಿ ಶ್ರೀ ಮಹರ್ಷಿ ಭಗೀರಥ ಮಹಾರಾಜರ ಜಯಂತಿಯನ್ನು ಆಚರಿಸಲಾಯಿತು ಹಿಲ್ ಗಾರ್ಡನ್ ಸಿಬ್ಬಂದಿಗಳಿಂದ ಶ್ರೀ ಮಹರ್ಷಿ ಭಗೀರಥ ಮಹಾರಾಜರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಲೋಕ ಕಲ್ಯಾಣಕ್ಕಾಗಿ ಗಂಗೆ ಧರೆಗಿಳಿಸಿದ ಭಗೀರಥ: ಭಗೀರಥ ಒಬ್ಬ ಶ್ರೇಷ್ಟ ಗುರುಭಕ್ತನಾಗಿ ಪುರಾಣಪುರುಷನಾಗಿ, ತನ್ನ ಸಾಹಸ, ಏಕಾಗ್ರ ಮನಸ್ಥಿತಿಗೆ ತಪೋನಿಷ್ಠೆಗೆ ಪ್ರಸಿದ್ಧನಾಗಿದ್ದನಿಂದ ಭಗೀರಥ ಪ್ರಯತ್ನ ಎಂಬ ನುಡಿ ಎಲ್ಲೆಡೆ ಪ್ರಸರಿಸಿತು. ಸತ್ಕಾರ್ಯಗಳಿಂದ ಜನರಿಗೆ ಒಳ್ಳೆಯದಾಗಬೇಕು. ಭೂಮಿಗೆ ಗಂಗೆಯನ್ನು ತರುವಲ್ಲಿ ಕಠೊರ ತಪಸ್ಸು ಮಾಡಿದ ಭಗೀರಥರು ಸವಾಲು ಮತ್ತು ಸಮಸ್ಯೆಗಳಿಗೆ ಎಂದಿಗೂ ಎದೆಗುಂದಲಿಲ್ಲ. ಸಮಾಜಕ್ಕೆ ಒಳಿತು ಮಾಡಲು ಪರಮಾತ್ಮನನ್ನು ಒಲಿಸಿಕೊಂಡವರು.

ಸಮಸ್ತ ಮನುಕುಲದ ಉದ್ದಾರಕ್ಕಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟ ಭಗೀರಥರಂಥ ಮಹಾತ್ಮರ ಆದರ್ಶ ಮತ್ತು ತತ್ವಗಳನ್ನು ಎಲ್ಲರು ತಮ್ಮ ಜೀವನದಲ್ಲಿ ಒಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಿಸಿದ್ದ‌ಕ್ಕೆ ನಮ್ಮೆಲ್ಲರ ಜೀವನ ಸಾರ್ಥಕವಾಗುತ್ತದೆ. ಲೋಕ ಕಲ್ಯಾಣಕ್ಕಾಗಿ ಗಂಗೆ ಧರೆಗಿಳಿಸಿದ ಭಗೀರಥ ಅವರನ್ನು ನಿತ್ಯವೂ ಆರಾಧಿಸೋಣ.

ಈ ಸಂದರ್ಭದಲ್ಲಿ ಹಿಲ್ ಗಾರ್ಡನ್ ಸಿಬ್ಬಂದಿಗಳಾದ ಪಾಂಡು ಮನ್ನಿಕೇರಿ, ವಿ ಆರ್ ಪರಸನ್ನವರ, ಶಿವು ಪಾಟೀಲ, ಮಹೇಶ್ ಚಿಕ್ಕೋಡಿ ಹಾಗೂ ಅನೇಕರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *