ಇಸ್ಲಾಮಾಬಾದ್ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸತತ ಐದನೇ ದಿನವೂ ಪ್ರತಿಭಟನೆ ಮುಂದುವರೆದಿದ್ದು ಹಲವೆಡೆ ಹಿನ್ನಡೆಯಾಗಿದೆ.
ಪಿಓಕೆ ರಾಜಧಾನಿ ಮುಜಾಫರಾಬಾದ್‌ನಲ್ಲಿ ಪ್ರತಿಭಟನೆ ಹತ್ತಿಕ್ಕಲು ಪಾಕಿಸ್ತಾನ ಸೇನೆ ನಡೆಸಿದ ಗುಂಡಿನ ದಾಳಿಗೆ ಕನಿಷ್ಠ ಮೂವರು ಬಲಿಯಾಗಿ, ಆರಕ್ಕೂ ಹೆಚ್ಚು ಮಂದಿ ದಾಳಿ ನಡೆಸಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮದರಸಾದ ಮೇಲೆ ಟಿಯರ್ ಗ್ಯಾಸ್ ಸಿಡಿಸಿದ್ದು ಮಕ್ಕಳು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯ ಸೆರೆಯಾಗಿದೆ.
ಪುಲ್ವಾಮಾ ದಾಳಿ ಬಳಿಕ ಪಾಕ್‌ನಿಂದ ರಫ್ತಾಗುವ ಒಣಹಣ್ಣು, ಕಲ್ಲುಪ್ಪು, ಸಿಮೆಂಟ್ ಮೇಲೆ ಆಮದು ಸುಂಕವನ್ನು ಭಾರತ 200ರಷ್ಟು ಹೆಚ್ಚಿಸಿತ್ತು. 2019ರ ನಂತರ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ಭಾರತದ ಜೊತೆಗಿನ ಸಂಪೂರ್ಣ ವ್ಯವಹಾರವನ್ನು ಭಾರತ ನಿಲ್ಲಿಸಿತ್ತು.
ಈ ಆರ್ಥಿಕ ಒತ್ತಡದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿದೆ. ಪಿಓಕೆಯಲ್ಲಿ ನಡೆಯುತ್ತಿರುವ ಹೋರಾಟಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಈ ಮಧ್ಯೆ ದೇಶದ ಆರ್ಥಿಕತೆಯ ಸುಧಾರಣೆಗಾಗಿ ಪಾಕಿಸ್ತಾನದ ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡೋದಾಗಿ ಪ್ರಧಾನಿ ಷೆಹಬಾಜ್ ಷರೀಫ್ ಘೋಷಣೆ ಮಾಡಿದ್ದಾರೆ.