ಚಿತ್ರದುರ್ಗ : ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ಮತ್ತು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ “ಮನೆಯಂಗಳದಲ್ಲಿ ಮಕ್ಕಳ ಹಬ್ಬ” ಹೆಸರಿನಲ್ಲಿ ” ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿ ” ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಭರಮಸಾಗರ ತಿಳಿಸಿದ್ದಾರೆ.
ಐದನೇ ತರಗತಿ ಯಿಂದ ದ್ವಿತೀಯ ಪಿಯುಸಿ ವರೆಗಿನ ಮಕ್ಕಳು ಕವಿಗೋಷ್ಟಿಯಲ್ಲಿ ಭಾಗವಹಿಸಬಹುದು ಮತ್ತು ಪದವಿ ಕಾಲೇಜಿನ ಉದಯೋನ್ಮುಖ. ಕವಿಗಳು “ಹಸಿರು ಕರ್ನಾಟಕ, ಅರಣ್ಯ ಅಭಿವೃದ್ಧಿ, ಪರಿಸರ ಪ್ರಾಣಿ ಪಕ್ಷಿ, ಜೀವವೈವಿಧ್ಯ ಅಳಿವು ಉಳಿವು, ಪ್ಲಾಸ್ಟಿಕ್ ನಿಷೇಧ, ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಈ ವಿಷಯಗಳ ಕುರಿತು ಕವಿತೆ ಬರೆಯಬಹುದು
ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕುವುದು. ಮೊಬೈಲ್ ಗೀಳಿನಿಂದ ಮಕ್ಕಳು ಹೊರಬಂದು ಬರಹದ ಕಡೆ ಗಮನಕೊಡುವುದನ್ನು ಕಲಿಸುವುದು, ವಿದ್ಯಾರ್ಥಿಗಳು ಸಾಹಿತ್ಯಿಕ ಸಾಂಸ್ಕೃತಿಕ ವೇದಿಕೆಗಳಲ್ಲಿ ಮಾತನಾಡುವುದನ್ನು ಕಲಿಸುವುದು, ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸುವುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಹೊಸ ಕವಿಗಳನ್ನು ಹುಡುಕುವ ಜೊತೆಗೆ ಪ್ರೋತ್ಸಾಹ ಮಾಡುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಗೀತಾ ಭರಮಸಾಗರ ಅವರು ತಿಳಿಸಿದ್ದಾರೆ.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುತ್ತದೆ. ಜೂನ್ 9 ರಂದು ಕಾರ್ಯಕ್ರಮ ಚಿತ್ರದುರ್ಗ ನಗರದ ತಮಟಕಲ್ಲು ರಸ್ತೆಯ ಇನ್ ಕಮ್ ಟ್ಯಾಕ್ಸ್ ಆಫೀಸ್ ಮುಂಭಾಗದಲ್ಲಿ ನಡೆಯಲಿದ್ದು ಕವಿತೆಗಳನ್ನು ಮೇ 30 ರೊಳಗೆ ಕಡ್ಡಾಯವಾಗಿ ಕಳುಹಿಸಬೇಕು*.
ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್, ಭಾವಚಿತ್ರ ದೊಂದಿಗೆ ಪೋನ್ ನಂಬರ್ ಹಾಕಿ ಅಂಚೆ ಅಥವಾ ಕೋರಿಯರ್ ಮೂಲಕ ಈ ಕೆಳಗಿನ ವಿಳಾಸಕ್ಕೆ ಕವಿತೆಗಳನ್ನು ಕೈ ಬರಹದಲ್ಲಿ ಬರೆದು ಕಡ್ಡಾಯವಾಗಿ ಕಳುಹಿಸಬೇಕು. ಜೊತೆಗೆ Gmail: rushigurukula@gmail.com, ಈ ವಿಳಾಸಕ್ಕೆ ಟೈಪ್ ಮಾಡಿ ಮೇಲ್ ಕಳಿಸಿ ಎಂದು ತಿಳಿಸಿದ್ದಾರೆ.
ಉತ್ತಮ ಮತ್ತು ಸುಂದರ ಕೈ ಬರಹಕ್ಕೆ ಸೂಕ್ತ ಬಹುಮಾನ ವಿರುತ್ತದೆ. ಕವಿತೆಗಳನ್ನು ಕಳುಹಿಸುವ ವಿಳಾಸ ಆಡಳಿತಾಧಿಕಾರಿಗಳು ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ (ರಿ) ನಂ 315/ಬಿ. ಒಂದನೇ ಅಡ್ಡ ರಸ್ತೆ, ಹತ್ತನೇ ಮುಖ್ಯ ರಸ್ತೆ. ಐಯುಡಿಪಿ ಬಡಾವಣೆ. ಚಿತ್ರದುರ್ಗ. 577501 ಹೆಚ್ಚಿನ ಮಾಹಿತಿಗಾಗಿ: 8073744244. 9113694200 ಸಂಪರ್ಕಿಸಲು ಕೋರಲಾಗಿದೆ.