Breaking
Wed. Dec 25th, 2024

4.5 ಲಕ್ಷ ರೂ. ಚೆಕ್  ದುರುಪಯೋಗ ಆರೋಪ ಕೇಳಿಬಂದ ಹಿನ್ನೆಲೆ ಪಾಲಿಕೆ ಆರೋಗ್ಯಾಧಿಕಾರಿ ವಿರುದ್ಧ ಪ್ರಕರಣ ದಾಖಲು…!

ಮೈಸೂರು, ಮೇ 16: ವ್ಯವಹಾರದ ನಿಮಿತ್ತ ಭದ್ರತೆಗಾಗಿ ನೀಡಿದ್ದ 4.5 ಲಕ್ಷ ರೂ. ಚೆಕ್  ದುರುಪಯೋಗ ಆರೋಪ ಕೇಳಿಬಂದ ಹಿನ್ನೆಲೆ ಪಾಲಿಕೆ ಆರೋಗ್ಯಾಧಿಕಾರಿ ವಿರುದ್ಧ ಮೈಸೂರಿನ  ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯವಹಾರದ ನಿಮಿತ್ತ ನೀಡಿದ್ದ ಚೆಕ್ನಲ್ಲಿ 4.5 ಲಕ್ಷ ರೂ. ನಮೂದಿಸಿಕೊಂಡು ಬೌನ್ಸ್ಗೆ ಯತ್ನಿಸಲಾಗಿದೆ.
ಪಾಲಿಕೆ ಹಿರಿಯ ಆರೋಗ್ಯಾಧಿಕಾರಿ ವೆಂಕಟೇಶ್ ಹಾಗೂ ಹಾಸನ ನಿವಾಸಿ ಕೇಶವಮೂರ್ತಿ ಎಂಬುವರಿಂದ ವಂಚನೆ ಮಾಡಿದ್ದು, ಸರಸ್ವತಿಪುರಂ ನಿವಾಸಿ ಮೀರಾ ಎಂಬುವವರಿಂದ ದೂರು ನೀಡಲಾಗಿದೆ.  ಸದ್ಯ ಇಬ್ಬರ ವಿರುದ್ಧ ವಂಚನೆ ಕೇಸ್ ದಾಖಲಿಸುವಂತೆ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದಿಂದ ಸರಸ್ವತಿಪುರಂ ಠಾಣಾ ಪೊಲೀಸರಿಗೆ ಆದೇಶ ನೀಡಲಾಗಿದೆ. ದೂರು ನೀಡಿರುವ ಮೀರಾ ಎಂಬುವವರು ಸರಸ್ವತಿಪುರಂನಲ್ಲಿ ಅನ್ನಪೂರ್ಣ ಆಫ್ ಸೆಟ್ ಮುದ್ರಣಾಲಯ ಇಟ್ಟುಕೊಂಡಿದ್ದಾರೆ.

Related Post

Leave a Reply

Your email address will not be published. Required fields are marked *