ಬೆಂಗಳೂರು : ಎಲೆಕ್ಟಾçನಿಕ್ ಸಿಟಿಯ ಖಾಸಗಿ ಕಾಲೇಜಿನ 5ನೇ ಮಹಡಿಯಿಂದ ಬಿದ್ದು ಆಂಧ್ರ ಮೂಲದ ವಿದ್ಯಾರ್ಥಿ ಕರಸಾಲ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ಕಂಪ್ಯೂಟರ್ ಸೈನ್ಸ್ 5ನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ತಡವಾಗಿ ಬಂದಿದ್ದಕ್ಕೆ ತನ್ನನ್ನು ನಿಂದಿಸಿದ್ದಾರೆ ಅಂತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ.