ಕನ್ನಡದಲ್ಲಿ ‘ಉಸಿರಿಗಿಂತ ನೀನೇ ಹತ್ತಿರ’, ನಾವಿಕ, ಚೇತನ್ ಕುಮಾರ್ ಅಹಿಂಸಾ ನಟಿಸಿದ್ದ ಅತಿರಥ, ನುಗ್ಗೇಕಾಯಿ, ಲಂಕೇ, ಡಿಎನ್‌ಎ, ಲೋಕಲ್ ಟ್ರೇನ್ 2023ರಲ್ಲಿ ತೆರೆಕಂಡ ಇನಾಮ್‌ದಾರ್ ಸಿನಿಮಾದಲ್ಲಿ ನಟಿಸಿದ್ದ ನಟಿ ಎಸ್ತರ್ ನರೋನ್ಹಾ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅದಕ್ಕೆ ಕಾರಣ ಅವರು ನೀಡಿದ ಒಂದು ಹೇಳಿಕೆ. ಕನ್ನಡದೊಂದಿಗೆ ತೆಲುಗಿನಲ್ಲಿ ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಎಸ್ತರ್ ನರೋನ್ಹಾ ಹೊಂದಿದ್ದಾರೆ. ಆಕೆಯನ್ನು ನೋಡಿದ ಬಳಿಕ ಖಂಡಿತವಾಗಿ ಆಕೆಯ ಗುರುತು ಸಿಗುತ್ತದೆ.
2019ರಲ್ಲಿ ಎಸ್ತರ್, ಗಾಯಕ ಹಾಗೂ ರಾಪರ್ ನೋಯೆಲ್ ಸೀನ್‌ರನ್ನು ವಿವಾಹವಾಗಿದ್ದರು. ಆದರೆ, ಈ ಮದುವೆ ಉಳಿದುಕೊಂಡಿದ್ದು 16 ದಿನಗಳ ಮಾತ್ರ. ಮದುವೆಯಾದ 16 ದಿನಗಳನ್ನೇ ನೋಯೆಲ್‌ನಿಂದ ಬೇರೆಯಾಗಿದ್ದ ಎಸ್ತರ್, ಒಂದು ವರ್ಷದ ಬಳಿಕ ಆತನಿಂದ ವಿಚ್ಛೇದನ ಪಡೆದುಕೊಂಡಿದ್ದನ್ನು ತಿಳಿಸಿದ್ದರು. ತೇಜಾ ನಿರ್ದೇಶನದ 1000 ಅಬ್ದಾಲು (2013) ಚಿತ್ರದಲ್ಲಿ ಎಸ್ತರ್ ನಟಿಸಿದ್ದಾರೆ. ಭೀಮಾವರಂ ಬುಲ್ಲೋಡು ಚಿತ್ರದಲ್ಲಿ ಎಸ್ತರ್ ಸುನಿಲ್ ಎದುರು ನಟಿಸಿದ್ದು ಇವರಿಗೆ ಜನಪ್ರಿಯತೆ ತಂದುಕೊಟ್ಟಿತು. ಅದರೊಂದಿಗೆ ಸಾಕಷ್ಟು ಚಿತ್ರಗಳಲ್ಲಿ ಮುಂಬೈ ಮೂಲದ ಬ್ಯೂಟಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಕಲ್ಯಾಣ್ ರಾಮ್ ಅಭಿನಯದ ಡೆವಿಲ್: ಬ್ರಿಟಿಷ್ ಸೀಕ್ರೆಟ್ ಏಜೆಂಟ್ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಬ್ಯೂಟಿಗೆ ಸಂಬಂಧಿಸಿದ ಕುತೂಹಲಕಾರಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಸ್ತುತ ಕನ್ನಡದಲ್ಲಾಗಲಿ, ತೆಲುಗು ಸಿನಿಮಾದಲ್ಲಾಗಲಿ ಎಸ್ತರ್‌ಗೆ ಅಷ್ಟಾಗಿ ಅವಕಾಶವಿಲ್ಲ. ಆಕೆಯ ಬೋಲ್ಡ್ ರೋಲ್‌ಗಳು ಕೂಡ ನೋಡುವವರೇ ಇಲ್ಲದಂತಾಗಿದೆ. ಇತ್ತೀಚೆಗಷ್ಟೇ ಟೀನಂಟ್ ಚಿತ್ರದಲ್ಲಿ ತನಿಖಾ ಅಧಿಕಾರಿಯಾಗಿ ನಟಿಸಿದ್ದರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಎಸ್ತರ್ ನೊರೊನ್ಹಾ ಶಾಕಿಂಗ್ ಕಾಮೆಎಂಟ್ ಮಾಡಿದ್ದು, ಇದು ವೈರಲ್ ಆಗಿದೆ. ತಾವು ಎರಡನೇ ಮದುವೆಯಾಗಲು ಸಿದ್ಧ ಎಂದು ಅವರು ಹೇಳಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.
ನನಗೆ ಜೀವನದಲ್ಲಿ ಒಬ್ಳೇ ಇರೋಕೆ ಬರೋದಿಲ್ಲ. ಏಕಾಂಗಿಯಾಗಿ ಬದುಕೋಕೆ ನನಗೆ ಸಾಧ್ಯವಿಲ್ಲ. ನಾನು ಮತ್ತೊಮ್ಮೆ ಮದುವೆಯಾಗುತ್ತೇನೆ. ನನಗೊಂದು ಸುಂದರ ಬದುಕು ಬೇಕು. ಅದಕ್ಕಾಗಿ ಸರಿಯಾದ ಸಂಗಾತಿಯ ಹುಡುಕಾಟದಲ್ಲಿದ್ದೇನೆ. ಆದರೆ, ಯಾವ ರೀತಿಯ ಹುಡುಗನನ್ನು ಮದುವೆಯಾಗಬೇಕು ಅನ್ನೋದರ ಬಗ್ಗೆ ನನಗೆ ಯಾವುದೇ ಸ್ಪಷ್ಟತೆ ಇಲ್ಲ. ಈಗಾಗಲೇ ಒಮ್ಮೆ ಮದುವೆಯಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ.ಈಗ ನನಗೆ ನನನ್ನು ಅರಿತುಕೊಳ್ಳುವಂಥ ಹುಡುಗ ಬೇಕು ಅಂತಾ ಅನಿಸಿದೆ. ಇದು ಯಾವುದೇ ಶೋ ಆಫ್‌ನ ಹೇಳಿಕೆಯಲ್ಲ ಎಂದೂ ಸ್ಪಷ್ಟ ಪಡಿಸಿದ್ದಾರೆ.
ಇನ್ನು ಮೊದಲ ಪತಿಯ ಬಗ್ಗೆ ಮಾತನಾಡಿರುವ ಎಸ್ತರ್, ಆತನೊಂದಿಗೆ ನಾನು 16 ದಿನ ಮಾತ್ರವೇ ಸಂಸಾರ ಮಾಡಿದೆ. ಅಷ್ಟರಲ್ಲೇ ಆತನ ನಿಜರೂಪ ನನಗೆ ಗೊತ್ತಾಗುತ್ತಾ ಹೋಯಿತು ಎಂದು ಎಸ್ತರ್ ಹೇಳಿದ್ದಾರೆ. ನೋಯೆಲ್ ಜೊತೆ ಒಂದು ವರ್ಷದ ರಿಲೇಷನ್‌ಷಿಪ್ ಬಳಿಕ ಎಸ್ತರ್ ವಿವಾಹವಾಗಿದ್ದು ಎನ್ನುವುದು ವಿಶೇಷ. 2019ರಲ್ಲಿ ಹಿರಿಯರ ಮನವೊಲಿಸಿ ಎಸ್ತರ್ ಹಾಗೂ ನೋಯೆಲ್ ವಿವಾಹ ನಡೆದಿತ್ತು. ಅವರ ಮದುವೆ ಒಂದು ವರ್ಷವೂ ಉಳಿಯಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಅವರು ಬೇರ್ಪಟ್ಟರು. ವಿಚ್ಛೇದನವನ್ನು 2020 ರಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಆ ಸಮಯದಲ್ಲಿ ನೋಯೆಲ್ ಮತ್ತು ಎಸ್ತರ್ ವಿಚ್ಛೇದನದ ಘೋಷಣೆಯು ಚರ್ಚೆಗೆ ಕಾರಣವಾಯಿತು.
ಮದುವೆಯಾದ 16 ದಿನಗಳ ನಂತರ ಆತನ ನಿಜಸ್ವರೂಪ ಹೊರಬಂದಿದೆ. ಅದಕ್ಕಾಗಿಯೇ ನಾನು ಬೇರೆಯಾಗಲು ನಿರ್ಧರಿಸಿದೆ. ನನಗೆ ತಕ್ಷಣ ವಿಚ್ಛೇದನ ಬೇಕು. ಮದುವೆ ಮುರಿದುಬಿದ್ದ ನಂತರ ನೋಯೆಲ್ ನನ್ನನ್ನು ನಿಂದಿಸಿದರು. ಬಿಗ್ ಬಾಸ್ ಮನೆಯಲ್ಲಿ ಸಹಾನುಭೂತಿ ಗಳಿಸಲು ಅವರು ಮಾತನಾಡಿದರು. ಸಹಾನುಭೂತಿಯೂ ಅವರಿಗೆ ಸಿಕ್ಕಿತು ಎಂದು ಎಸ್ತರ್ ಹೇಳಿದ್ದಾರೆ. ವಿಚ್ಛೇದನದ ಬಗ್ಗೆ ನಾನು ಎಲ್ಲಿಯೂ ಮಾತನಾಡಲು ಬಯಸುವುದಿಲ್ಲ. ಆದರೆ, ನೋಯೆಲ್ ಅಭಿಮಾನಿಗಳು ನನ್ನನ್ನು ಟ್ರೋಲ್ ಮಾಡಿದರು. ಒಬ್ಬಾತ ತನ್ನ ಮೇಲೆ ಆ್ಯಸಿಡ್ ಸುರಿಯುವ ಬೆದರಿಕೆ ಹಾಕಿದ್ದ ಎಂದು ಎಸ್ತರ್ ತಿಳಿಸಿದ್ದಾರೆ.