ಚಿತ್ರದುರ್ಗ : ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಮಹಿಳಾ ಅಧ್ಯಕ್ಷರಾದ ಆರತಿ ಮತ್ತು ವಿಭಾಗೀಯ ಮಟ್ಟದ ಪದಾಧಿಕಾರಿ ಜ್ಯೋತಿ ಅವರು ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿದರು.
ಚಿತ್ರದುರ್ಗ ನಗರದ ಜಿಲ್ಲಾ ಕ್ರೀಡಾಂಗಣದ ರಸ್ತೆಯ ವೀರಸೌಧದ ಆವರಣದಲ್ಲಿ ಹಮ್ಮಿಕೊಂಡಿದ್ದ ಯೋಗಾಸನ ಕಾರ್ಯಕ್ರಮದಲ್ಲಿ ಯೋಗ ಹಾಗೂ ಪ್ರಾಣಾಯಾಮದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಹೇಮಮೂರ್ತಿ, ಶೋಭಾ, ಜೀವಿತಾ, ನಾಗೇಶಣ್ಣ, ಲವಕುಮಾರ್, ಶಂಕರಪ್ಪ ಹಾಗೂ ಕಿಸಾನ್ ಸಂಘಟನೆಯ ಅಧ್ಯಕ್ಷ ಕೆಂಚವೀರಪ್ಪ, ಜಿಲ್ಲಾ ಅಧ್ಯಕ್ಷರಾದ ದೇವಾನಂದ ನಾಯ್ಕ್, ಕಾರ್ಯದರ್ಶಿ ಗುರುಮೂರ್ತಿ, ಖಜಾಂಚಿ ಹಾಗೂ ಯುವ ಪ್ರಭಾರೆ ಅಧ್ಯಕ್ಷ ನವೀನ್ ಹಾಗೂ ಇತರೆ ಪದಾಧಿಕಾರಿಗಳು ಇದ್ದರು.