ಮೈಸೂರು : ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಟು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಈಶ್ವರಪ್ಪ ಅವರು ಬಂಡಾಯವೆದ್ದು, ಬಿಜೆಪಿ ವಿರುದ್ಧವೇ ಸ್ಪರ್ಧೆ ನಡೆಸಿದ್ದರು. ಇದೀಗ ರಘುಪತಿ ಭಟ್ ಸಮಯ.
ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಿವೆ. ಬಿಜೆಪಿಯಲ್ಲಿ ನೈರುತ್ಯ ಪದವಿಧರ ಕ್ಷೇತ್ರದಿಂದ ಸ್ಪರ್ಧಿಸುವ ಹೆಬ್ಬಯಕೆಯನ್ನು ಮಾಜಿ ಶಾಸಕ ರಘುಪತಿ ಭಟ್ ಇಟ್ಟುಕೊಂಡಿದ್ದರು. ಟಿಕೆಟ್ ಸಿಗುವ ನಿರೀಕ್ಷೆಯೂ ಇತ್ತು. ಆದರೆ ಈಗ ಅವರ ಲೆಕ್ಕಚಾರ ಉಲ್ಟಾ ಆಗಿದೆ. ಬಿಜೆಪಿ ಬೇರೆಯವರಿಗೆ ಮಣೆ ಹಾಕಿದೆ. ಧನಂಜಯ ಅವರಿಗೆ ಟಿಕೆಟ್ ಕೊಟ್ಟಿದೆ.
ಇದರಿಂದ ರಘುಪತಿ ಭಟ್ ಕೋಪಗೊಂಡಿದ್ದು, ಬೇಸರ ಹೊರ ಹಾಕಿದ್ದಾರೆ. ನನಗೆ ಟಿಕೆಟ್ ವಂಚಿಸಿದ್ದು ಭೌಗೋಳಿಕ ಅನ್ಯಾಯ ಮತ್ತು ಕಾರ್ಯಕರ್ತರಿಗೆ ಆಗಿರುವ ದ್ರೋಹ. ತನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರು ಸ್ಪರ್ಧೆಯಿಂದ ಸರಿಯಾಗುವುದಿಲ್ಲ. ಯಾರಾದರೂ ಹಿರಿಯ ನಾಯಕರಿಗೆ ಕೊಟ್ಟರು ನನಗೆ ಬೇಸರವಿಲ್ಲ.
ಬಾಲ್ಯದಿಂದ ಸ್ವಯಂ ಸೇವಕ, ಕಾರ್ಯಕರ್ತ. ಬಿಜೆಓಯ ಜಿಲ್ಲಾಧ್ಯಕ್ಷನಾಗಿದ್ದೆ. ಯಾರೇ ಅಭ್ಯರ್ಥಿಯಾಗಬೇಕು ಅಂದ್ರೆ ಬೂತ್ ಮಟ್ಟದಿಂದ ಮಾಹಿತಿ ಸಂಗ್ರಹಿಸಿ, ಆಯ್ಕೆ ಮಾಡಿಕೊಳ್ಳಿ. ಆದರೆ ಇತ್ತಿಚೆಗೆ ಆ ರೀತಿ ಇಲ್ಲ. ಕೇಂದ್ರದಿಂದ ಪ್ರಭಾವ ಇರುವವರಿಗೆ ಟಿಕೆಟ್ ಸಿಕ್ತಾ ಇದೆ. ನಾನೀಗ ನಿಲ್ತಾ ಇರುವುದು ನಾನೊಬ್ಬ ಸಕ್ರಿಯ ರಾಜಕಾರಣಿ. ಶಾಸಕನಾಗಿದ್ದಾಗ ಕುಟುಂಬವನ್ನು ನೋಡದೆ ಕೆಲಸ ಮಾಡಿದ್ದೀನಿ. ಹೀಗಾಗಿ ನಾನು ನಿಲ್ಲುತ್ತಿದ್ದೇನೆ. ಈ ಮೂಲಕ ಪದವೀಧರ ಕ್ಷೇತ್ರದ ಚುನಾವಣೆಯಿಂದ ಬಿಜೆಪಿಗೆ ಬಂಡಾಯ ಬಿಸಿ ತಟ್ಟಲಿದೆ.