ದಕ್ಷಿಣ ಭಾರತದಲ್ಲಿಯೂ ಜನಪ್ರಿಯ ನಟಿ. ಅವರ ಸಹೋದರಿ ಶಮಿತಾ ಶೆಟ್ಟಿ ಸಹ ನಟಿಯೇ. ಶಮಿತಾ ಶೆಟ್ಟಿ ಕರ್ನಾಟಕ ಮೂಲದ ಬಾಲಿವುಡ್ ಚೆಲುವೆ ಶಿಲ್ಪಾ ಶೆಟ್ಟಿಯ ಸಹೋದರಿ ಶಮಿತಾ ಶೆಟ್ಟಿಗೆ ಅನಾರೋಗ್ಯ ಉಂಟಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಅಕ್ಕನಂತೆ ದೊಡ್ಡ ಮಟ್ಟದಲ್ಲಿ ಮಿಂಚಲು ಸಾಧ್ಯವಾಗಲಿಲ್ಲವಾದರೂ ತಕ್ಕಮಟ್ಟಿಗೆ ಹೆಸರು ಮಾಡಿದೆ. ಸಿನಿಮಾಗಳು ಮಾತ್ರವೇ ಅಲ್ಲದೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಶಮಿತಾ ಶೆಟ್ಟಿ ಭಾಗವಹಿಸಿದ್ದಾರೆ. ಇದೀಗ ನಟಿ ಶೈತಾ ಶೆಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮತ್ತು ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಆಸ್ಪತ್ರೆಯ ಬೆಡ್ ಮೇಲೆ ಕುಳಿತು ವಿಡಿಯೋ ಒಂದನ್ನು ರೆಕಾರ್ಡ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ ಶಮಿತಾ ಶೆಟ್ಟಿ. ಈ ವಿಡಿಯೋದಲ್ಲಿ ತಮಗೆ ಬಂದಿರುವ ಖಾಯಿಲೆ, ಅದರ ಲಕ್ಷಣಗಳು ಚಿಕಿತ್ಸೆಗಳು ಇತರ ವಿಷಯಗಳ ಬಗ್ಗೆ ಶಮಿತಾ ಮಾತನಾಡಿದ್ದಾರೆ. ವಿಡಿಯೋವನ್ನು ರೆಕಾರ್ಡ್ ಮಾಡಿರುವುದು ನಟಿ ಶಿಲ್ಪಾ ಶೆಟ್ಟಿ. ವಿಡಿಯೋದಲ್ಲಿ ಮಾತನಾಡುತ್ತಿರುವ ಶಮಿತಾ ಶೆಟ್ಟಿ ಅವರು ಎಂಡೋಮೆಟ್ರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಎಲ್ಲ ಮಹಿಳೆಯರ ಸಮಸ್ಯೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದರು.
‘ಎಲ್ಲಾ ಮಹಿಳೆಯರು ದಯವಿಟ್ಟು ಎಂಡೋಮೆಟ್ರಿಯಾಸಿಸ್ ಎಂದರೇನು ಎಂದು ತಿಳಿದುಕೊಳ್ಳಿ, ಶೇ 40 ಈ ಸಮಸ್ಯೆ ಇರುತ್ತದೆ. ಎಂಡೋಮೆಟ್ರಿಯಾಸಿಸ್ ತೀವ್ರ ನೋವು ಉಂಟು ಮಾಡುವ, ಡಿಸ್ ಕಂಫರ್ಟ್ ಮಾಡುವ ವ್ಯಾದಿ. ನಿಮ್ಮ ದೇಹದಲ್ಲಿ ಯಾವುದೇ ನೋವು ಕಾಣಿಸಿಕೊಂಡಾಗ ಅದನ್ನು ಗುರುತಿಸಿ ಅದರ ಮೂಲವನ್ನು ಹುಡುಕಿ, ದೇಹದ ಬಗ್ಗೆ ಧನಾತ್ಮಕವಾಗಿರಿ. ಎಷ್ಟೋ ಮಂದಿ ಮಹಿಳೆಯರಿಗೆ ಎಂಡೋಮೆಟ್ರಿಯಾಸಿಸ್ ಎಂದರೇನು ಎಂಬುದು ಸಹ ಗೊತ್ತಿಲ್ಲ. ಸಾಧ್ಯವಾದಷ್ಟು ಈ ಖಾಯಿಲೆ ಬಗ್ಗೆ ಜಾಗೃತಿ ಮೂಡಿಸಬೇಕು. ‘ನನ್ನ ವೈದ್ಯರಾದ ನೀತಾ ವಾರ್ಟಿ ಮತ್ತು ಸುನಿತಾ ಬ್ಯಾನರ್ಜಿಗೆ ನಾನು ಧನ್ಯವಾದ ಹೇಳಲೇ ಬೇಕು. ಅವರು ನನ್ನ ನೋವಿಗೆ ಕಾರಣ ತಿಳಿಸಿಕೊಟ್ಟರು, ಸಮಸ್ಯೆಯ ಬೇರನ್ನು ನಹುಡುಕಿ ತೆಗೆದರು. ಈಗ ಶಸ್ತ್ರಚಿಕಿತ್ಸೆಯ ಮೂಲಕ ಆ ಬೇರಿನಿಂದಲೇ ಕತ್ತರಿಸಿ ತೆಗೆಯಲಿದ್ದಾರೆ. ನಾನು ಅವರಿಗೆ ಆಭಾರಿಯಾಗಿದ್ದೇನೆ’ ಎಂದು ಶಮಿತಾ. ಸಹ ನಟಿಯರಾದ ಬಿಪಾಶಾ ಬಸು, ದಿಯಾ ಮಿರ್ಜಾ ಇನ್ನೂ ಹಲವು ನಟಿಯರು ಕಾಣಿಸಿಕೊಂಡಿದ್ದಾರೆ, ಆದಷ್ಟು ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.