Breaking
Tue. Dec 24th, 2024

ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿಇಡಬೇಕಾದರೆ ಕೇವಲ ಗೋಧಿ ಹಿಟ್ಟಿನ ಚಪಾತಿ ಸೇವಿಸಿ…!

ನಮ್ಮಲ್ಲಿ ಹೆಚ್ಚಿನವರು ನಿಯಮಿತವಾಗಿ ಚಪಾತಿ ಸೇವಿಸುತ್ತಾರೆ.ಬ್ಲಡ್ ಶುಗರ್ ಹೆಚ್ಚಾಗಿದ್ದಾಗ ಚಪಾತಿಯನ್ನೇ ಸೇವಿಸಲಾಗುತ್ತದೆ.
ಆದರೆ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿಇಡಬೇಕಾದರೆ ಕೇವಲ ಗೋಧಿ ಹಿಟ್ಟಿನ ಚಪಾತಿ ಸೇವಿಸಿದರೆ ಸಾಕಾಗುವುದಿಲ್ಲ. ಚಪಾತಿ ಮಾಡುವಾಗ ಗೋಧಿ ಹಿಟ್ಟಿಗೆ ಈ ಒಣ ಹಣ್ಣಿನ ಪುಡಿಯನ್ನು ಕೂಡಾ ಸೇವಿಸಬೇಕು.
ಹೌದು, ಗೋಧಿ ಹಿಟ್ಟಿಗೆ ಬಾದಾಮಿ ಪುಡಿಯನ್ನು ಬೆರೆಸಿ ಚಪಾತಿ ಮಾಡಿ ಸೇವಿಸಿದರೆ ರಕ್ತದ ಸಕ್ಕರೆ ಸದಾ ನಿಯಂತ್ರಣದಲ್ಲಿ ಇರುತ್ತದೆ.ಇದು ರಕ್ತದ ಸಕ್ಕರೆಯನ್ನು ಹೆಚ್ಚಾಗಲು ಬಿಡುವುದಿಲ್ಲ.
ಬಾದಾಮಿಯಲ್ಲಿರುವ ಮೆಗ್ನೀಸಿಯಮ್ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.ಇದರಲ್ಲಿರುವ ವಿಟಮಿನ್ ಇ, ಮ್ಯಾಂಗನೀಸ್ ಸೇರಿದಂತೆ ಅನೇಕ ಜೀವಸತ್ವಗಳು ಮತ್ತು ಖನಿಜಗಳು ಶುಗರ್ ರೋಗಿಗಳಿಗೆ ಅಗತ್ಯವೆಂದು ಪರಿಗಣಿಸಲಾಗಿದೆ.
ಬಾದಾಮಿ ಮತ್ತು ಗೋಧಿ ಹಿಟ್ಟಿನ ಚಪಾತಿ ಮಾಡಲು ಮೊದಲು 1 ಕಪ್ ಹಿಟ್ಟು ತೆಗೆದುಕೊಳ್ಳಿ.ಅದರಲ್ಲಿ ಸುಮಾರು 1 ಚಮಚ ಬಾದಾಮಿ ಪುಡಿಯನ್ನು ಮಿಶ್ರಣ ಮಾಡಿ ಹಿಟ್ಟು ತಯಾರಿಸಿಕೊಳ್ಳಿ.
ನಂತರ ಮಾಮೂಲಿ ಚಪಾತಿ ಮಾಡುವಂತೆ ಚಪಾತಿ ಲಟ್ಟಿಸಿ, ಬೇಯಿಸಿ ತಿನ್ನಬಹುದು. ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ.  ಆವಿಷ್ಕಾರ್ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.

Related Post

Leave a Reply

Your email address will not be published. Required fields are marked *