ಬೆಂಗಳೂರು, ಮೇ.18 : ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರ ಸಾಲು ಸಾಲು ಹಿಟ್ ಸಿನಿಮಾಗಳಿಂದ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದೊಡ್ಡ ಅಭಿಮಾನಿ ಬಳಗವನ್ನು ಪ್ರಕಟಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಪ್ರಾಜೆಕ್ಟ್ ಬಾಚಿಕೊಳ್ಳುವುದರ ಮೇಲೆ ಹೆಚ್ಚು ಗಮನ ಹರಿಸುತ್ತವೆ.
ಇದೀಗ ಮುಂಬೈನ ಅಟಲ್ ಸೇತು ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಜೊತೆಗೆ ಈ ಟ್ವೀಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ರೀಟ್ವೀಟ್ ಕೂಡ ಮಾಡಿದ್ದಾರೆ. ಈ ವಿಡಿಯೋ ವಿಚಾರವಾಗಿ ಖಾನಾಪುರ ಕ್ಷೇತ್ರದ ಕಾಂಗ್ರೆಸ್‌ನ ಮಾಜಿ ಶಾಸಕ ಡಾ.ಅಂಜಲಿ ನಿಂಬಾಳ್ಕರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಡಾ.ಅಂಜಲಿ ನಿಂಬಾಳ್ಕರ್ ವಿವಾದಾತ್ಮಕ ಹೇಳಿಕೆ
ಹೌದು, ಮುಂಬೈನ ಅಟಲ್ ಸೇತುವೆಯ ಮೇಲೆ ನಿಂತು ಅಭಿವೃದ್ಧಿಗೆ ಮತಹಾಕಿ ಎಂದು ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಟ್ವೀಟ್ ಮೂಲಕ ‘ಬೂಟು ನೆಕ್ಕುವುದನ್ನು ನಿಲ್ಲಿಸಿ, ಇದು ನಿಮ್ಮನ್ನು ಮೆಗಾಸ್ಟಾರ್ ಮಾಡಿಲ್ಲ ಎಂದು ನಟಿ ರಶ್ಮಿಕಾ ವಿರುದ್ಧ ಖಾನಾಪುರ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಶಾಸಕ ಡಾ.ಅಂಜಲಿ ನಿಂಬಾಳ್ಕರ್ ವಿವಾದದ ಮಾತುಗಳನ್ನಾಡಿದ್ದಾರೆ.
ಅಟಲ್ ಸೇತುಗೆ ಬಗ್ಗೆ ಮಾತನಾಡಿದ್ದ ರಶ್ಮಿಕಾ, ‘ಭಾರತದ ಅತಿ ಉದ್ದನೆಯ ಸಮುದ್ರ ಬ್ರಿಜ್. ಬರೋಬ್ಬರಿ 22 ಕಿಲೋಮೀಟರ್ ಉದ್ದವಿದೆ. ಎರಡು ಗಂಟೆಗಳ ಪ್ರಯಾಣ ಈಗ ಕೇವಲ 20 ನಿಮಿಷಗಳಲ್ಲಿ ಮುಗಿಯುತ್ತದೆ. ನಂಬಲೂ ಅಸಾಧ್ಯ. ಕೆಲವು ವರ್ಷಗಳ ಹಿಂದೆ ಯಾರೂ ಇದನ್ನು ಕೇಳಲಿಲ್ಲ’. ‘ಭಾರತದದಾಗಿ ದೊಡ್ಡ ಕನಸು ಕಾಣಲು ಸಾಧ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಏಳೇ ವರ್ಷಗಳಲ್ಲಿ ಈ ದೊಡ್ಡ ಬ್ರಿಡ್ಜ್ ನಿರ್ಮಾಣ ಮಾಡಿದ್ದೇವೆ. ಅಟಲ್ ಸೇತು ಇದು ಕೇವಲ ಸೇತುವೆ ಅಲ್ಲ, ಯುವ ಭಾರತಕ್ಕೆ ಇದು ಗ್ಯಾರಂಟಿ. ಈ ರೀತಿಯ ನೂರು ಅಟಲ್ ಸೇತುವೆ ಸ್ಥಾಪಿಸಬೇಕು ಎಂದರೆ ಅಭಿವೃದ್ಧಿಗೆ ಮತ ಹಾಕಿ’ ಎಂದು ರಶ್ಮಿಕಾ ಹೇಳಿದ್ದಾರೆ.