ಹುಬ್ಬಳ್ಳಿ, ಮೇ 18: ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು, ಆದರೆ ನನ್ನ ಮಗಳನ್ನು ಕೊಲೆ ಮಾಡಿದರು ಎಂದು ಮೃತ ನೇಹಾ ತಂದೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಪೋರೇಟರ್ ನಿರಂಜನ ಹಿರೇಮಠ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನನ್ನ ವಾರ್ಡ್ನಲ್ಲಿ ಎರಡು ಕೊಲೆಗಳು ಆಗಿವೆ. ಮೊದಲು ನನ್ನ ಮಗಳ ಕೊಲೆ ನಡೆಯಿತು. ಬಳಿಕ ಅಂಜಲಿ ಯುವತಿಯ ಕೊಲೆ ನಡೆಯಿತು. ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ ಮಾಡುತ್ತಿದ್ದಾರೆ. ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಕೂಲಿ ಮಾಡಿ ಬದುಕುವ ಜನಾಂಗದ ಯುತಿ ಕೊಲೆ ಮಾಡಿದ್ದಾರೆ. ನನ್ನ ಮಗಳ ಬಲಿ ಪಡೆದಿದ್ದಕ್ಕೆ ಇಡೀ ಜಗತ್ತು ಆಕ್ರೋಶ ವ್ಯಕ್ತ ಪಡಿಸಿದರು. ಅನೇಕ ರಾಜಕೀಯ ನಾಯಕರು ಮನೆ ಬರುವುದನ್ನು ತಪ್ಪಿಸಿದರು. ರೇವಣ್ಣ ಅವರು ಮನೆ ಬರುತ್ತಿದ್ದರು ಅವರನ್ನು ಬರದಂತೆ ಮಾಡಿದರು.
ವೀಣಾ ಕಾಶಪ್ಪನವರ ಅವರು ಕೂಡ ಮನೆ ಬರುವುದಾಗಿ ಹೇಳಿದ್ದರು. ಆದರೆ ಅವರು ಬರದಂತೆ ಮಾಡಿದರು. ಯಾರೊಂದಿಗೆ ಯಾರು ಮಾತನಾಡಿದ್ದಾರೆ ಎಂದು ಎಲ್ಲ ಫೋನ್ ರೆಕಾರ್ಡ್ ಇವೆ. ಗೃಹ ಸಚಿವರು ಏಕೆ ಸುಮ್ಮನಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಜಂಗಮ, ಅಂಬಿಗರ ಸಮುದಾಯ ಸೇರಿ ಮುಂದೆ ಉಗ್ರ ಹೋರಾಟ ಮಾಡುತ್ತೇವೆ. ಸರ್ಕಾರ ಗುಂಡಾ, ರೌಡಿ ಶೀಟರ್ಗಳ ದಂಧೆ ಬಂದ್ ಮಾಡಬೇಕು. ಅಲ್ಲದೆ ರೌಡಿಗಳ ಚಲನವಲನ ಮೇಲೆ ಕಣ್ಣಿಡಬೇಕು. ಅಂಜಲಿ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಬೇಕು. ಅಂಜಲಿ ಕುಟುಂಬಕ್ಕೆ ಭದ್ರತೆ ನೀಡಬೇಕು. ಅವರು ಕುಟುಂಬಕ್ಕೆ ಒಂದು ಮನೆ, ತಾತ್ಕಾಲಿಕ ಕೆಲಸ ನೀಡಬೇಕು. ಈ ಬಗ್ಗೆ ವಾಗ್ದಾನ ಪತ್ರ ನೀಡಬೇಕು ಎಂದಿದ್ದಾರೆ.