Breaking
Wed. Dec 25th, 2024
ಚಳ್ಳಕೆರೆ, ಮೇ. 18 : ಜನಪರ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಸರ್ವರಿಗೂ ಅನುಕೂಲವಾಗುವಂತೆ ರೂಪಿಸುವ ಯೋಜನೆಗಳು ಜಾರಿಯಾಗಲು ಮೇಲ್ಮನವಿಯಲ್ಲಿ ಪಕ್ಷದ ಬಹುಮತ ಇರಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಚಳ್ಳಕೆರೆ ನಗರದ ಗೊಲ್ಲರ ಹಾಸ್ಟೆಲ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.  ಶಿಕ್ಷಕರ ಬೇಡಿಕೆಯಂತೆ ಒಪಿಎಸ್ ಜಾರಿ ಮಾಡಲು ಮತ್ತು 7 ನೇ ವೇತನ ಆಯೋಗದ ಸಿದ್ದತೆ ಸರ್ಕಾರದ ಚಿಂತನೆಯಾಗಿದೆ.
ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ದಿಯಾಗಬೇಕಿದೆ. ಶೈಕ್ಷಣಿಕ ಕಾರ್ಯಕ್ರಮಗಳಾಗಿ ಬಿಸಿಯೂಟ, ಶೂ ಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿ ಮತ್ತು ದಾಖಲಾಗಿ ಹೆಚ್ಚಳ ಆಗುವ ರೀತಿ ಯೋಜನೆಗಳನ್ನು ಜಾರಿ ಮಾಡಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಪಕ್ಷದ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಬೆಂಬಲಿಸಿ ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು. ನಾವು ಸಹ ಶಿಕ್ಷಕಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಎನ್‌ಪಿಎಸ್ ರದ್ದು ಮಾಡಬೇಕೆಂದು ಫ್ರೀಡಮ್ ಪಾರ್ಕಲ್ಲಿ ಶಿಕ್ಷಕರು ಪ್ರತಿಭಟನೆ ನಡೆಸಿ ಆತ್ಮಹತ್ಯೆಗೂ ಯತ್ನಿಸಿದ್ದರೂ ಕಳೆದ ಬಿಜೆಪಿ ಸರ್ಕಾರದಲ್ಲಿ ನ್ಯಾಯ ಸಿಗಲಿಲ್ಲ. ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಶಿಕ್ಷಕರ ಪ್ರತಿಭಟನೆ ಸ್ಥಳಕ್ಕೂ ಸಹ ಬಂದು ತಿರುಗಿ ನೋಡಲಿಲ್ಲ. ಆದರೆ ಈಗ ಮತ ಶಿಕ್ಷಕರ ಕೇಳಲು ಮುಂದಾಗಿದೆ.
ಎನ್‌ಪಿಎಸ್ ರದ್ದುಪಡಿಸಲು ಮತ್ತು 7 ನೇ ವೇತನ ಜಾರಿ ಮಾಡಲು 2 ನೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದತೆ ಮಾಡಿಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆಯನ್ನು ಸಮಾನವಾಗಿ ಕಾಣಬೇಕಿದೆ. ಕಳೆದ ಬಿಜೆಪಿ ಸರ್ಕಾರ ಮಕ್ಕಳಿಗೆ ಮೊಟ್ಟೆ ನೀಡುವಲ್ಲಿ ಜಾತಿ, ವರ್ಗ ಬೇಧ ಮಾಡಲಾಯಿತು. ಸಾಮಾಜಿಕ ನ್ಯಾಯಬದ್ದತೆಯಲ್ಲಿ ಆಡಳಿತ ಮಾಡುವ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಡಿ.ಟಿ. ಶ್ರೀನಿವಾಸ್ ಸ್ಪರ್ಧಿಸಲು ಅವಕಾಶವಾಗಿದೆ. ಮತದಾನ ಗೆಲ್ಲಿಸಬೇಕು ಎಂದರು.
ಕೆಪಿಸಸಿ ಪ್ರಧಾನ ಕಾರ್ಯದರ್ಶಿ ನೆರ‍್ಲಗುಂಟೆ ರಾಮಪ್ಪ ಮಾತನಾಡಿ, ಮೇಲ್ಮನೆ ಸ್ಥಾನವನ್ನು ಚಿಂತಕರ ಚಾವಡಿ ಎಂದು ಕರೆಯಲಾಗುತ್ತಿತ್ತು. ಪ್ರಸ್ತುತ ಆ ಸ್ಥಾನದ ಘನತೆ ಗೊತ್ತಿಲ್ಲದಿದ್ದವರು ಪ್ರವೇಶ ಮಾಡುತ್ತಿದ್ದಾರೆ. ಹಣವಂತರು ಮತ್ತು ವಾಣಿಜ್ಯೋದ್ಯಮಿಗಳಿಗೆ ಸೀಮಿತವಾಗುತ್ತಿರುವ ವಿಧಾನ ಪರಿಷತ್ ಚುನಾವಣೆಗಳು ಪ್ರಜಾಪ್ರಭುತ್ವಕ್ಕೆ ಅಪಾಯವಾಗುತ್ತಿವೆ. ಶಿಕ್ಷಕರ ಮತ ಪಡೆದು ಗೆದ್ದಿದ್ದ ವೈ.ಎ. ನಾರಾಯಣಸ್ವಾಮಿ ರಾಜಿನಾಮೆ ಕೊಟ್ಟು ಹೆಬ್ಬಾಳ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗಿತ್ತು. ಇಂತಹ ಸೀಮಿತತೆ ಇಲ್ಲದವರನ್ನು ಸೋಲಿಸಬೇಕು ಎಂದು ಹೇಳಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾ ರವಿಕುಮಾರ್ ಬಾಲರಾಜ್, ಟಿ. ಶಶಿಕಲಾ ಸುರೇಶ್‌ಬಾಬು, ಸದಸ್ಯ ಜಿ.ಟಿ. ಬಾಬುರೆಡ್ಡಿ, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿಟಿ.ಶಶಿಧರ, ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ವೀರಭದ್ರಯ್ಯ, ನಿವೃತ್ತಿ ಪ್ರಾಂಶುಪಾಲ ಬಿ.ವಿ.ಸಿರಿಯಣ್ಣ ಕಸಾಪ ತಾಲ್ಲೂಕು ಅಧ್ಯಕ್ಷ ಹಾಗೂ ಮುಖ್ಯ ಶಿಕ್ಷಕರಾದ ಜಿ.ಟಿ. ವೀರಭದ್ರಸ್ವಾಮಿ, ಎಲ್. ರುದ್ರಮುನಿ, ದೊಡ್ಡಯ್ಯ, ಸೂರನಾಯಕ, ಡಿ.ಟಿ. ಶ್ರೀನಿವಾಸನ್, ಗುರುಲಿಂಗಪ್ಪ, ಸಿ.ಟಿ. ವೀರೇಶ್, ಇಂಡಸ್ ವ್ಯಾಲಿ ಚಿಕ್ಕಣ್ಣ, ಮಾರುತಿ, ಅನ್ವರ್, ಮಾಸ್ಟರ ಮುಖಂಡರಾದ ಬಿ.ವಿ. ಸಿರಿಯಪ್ಪ, ಬ್ಯಾಂಕ್ ಸೂರಯ್ಯ,ಮೂಡಲಗಿರಿಪ್ಪ ಪ್ರಭುಸ್ವಾಮಿ, ತಿಪ್ಪೇರುದ್ರಪ್ಪ, ಸಿದ್ದಲಿಂಗಪ್ಪ ಮತ್ತಿತರರು ಇದ್ದರು.

Related Post

Leave a Reply

Your email address will not be published. Required fields are marked *