ಚಿತ್ರದುರ್ಗ, ಮೇ. 18 : ತಪಸ್ಸಿನಿಂದ ಗಂಗೆಯನ್ನೇ ಧರೆಗಿಳಿಸಿದ ಭಗೀರಥರ ಹೆಸರಿಟ್ಟುಕೊಂಡು ರಾಮ್‍ಜನಾರ್ಧನ್ ಚಿತ್ರ ನಿರ್ದೇಶಿಸಿರುವುದನ್ನು ಜಿಲ್ಲಾ ಉಪ್ಪಾರ ಸಮಾಜದ ನಿಕಟಪೂರ್ವ ಅಧ್ಯಕ್ಷ ಆರ್.ಮೂರ್ತಿ ಹಾಗೂ ಮಾಜಿ ಕಾರ್ಯದರ್ಶಿ ಬಸವರಾಜ್ ಇವರುಗಳು ತೀವ್ರವಾಗಿ ಖಂಡಿಸಿದ್ದಾರೆ.
ಭಗೀರಥರಿಗೆ ಪೌರಾಣಿಕ ಹಿನ್ನೆಲೆಯಿದೆ. ಅಂತಹ ಮಹರ್ಷಿಯ ಹೆಸರನ್ನು ಚಿತ್ರಕ್ಕಿಟ್ಟುಕೊಂಡು ಹಾಡು, ಕುಣಿತ, ಅಶ್ಲೀಲ ದೃಶ್ಯಗಳು, ಅರೆಬರೆ ಬಟ್ಟೆಗಳನ್ನು ತೊಟ್ಟು ಪ್ರದರ್ಶಿಸುವಂತ ದೃಶ್ಯಗಳ ಟೀಸರ್ ಇತ್ತೀಚೆಗೆ ಬಿಡುಗಡೆಗೊಂಡಿದೆ. ಕೂಡಲೆ ಚಿತ್ರಕ್ಕಿಟ್ಟಿರುವ ಭಗೀರಥರ ಹೆಸರನ್ನು ಬದಲಾವಣೆ ಮಾಡಬೇಕು.
ಇಲ್ಲದಿದ್ದರೆ ಉಪ್ಪಾರ ಸಮಾಜದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು. ಒಂದು ವೇಳೆ ಹೆಸರು ಬದಲಿಸದಿದ್ದರೆ ಯಾವ ಚಿತ್ರಮಂದಿರಗಳಲ್ಲಿಯೂ ಪ್ರದರ್ಶನಕ್ಕೆ ಅವಕಾಶ ಕೊಡುವುದಿಲ್ಲವೆಂದು ಆರ್.ಮೂರ್ತಿ ಹಾಗೂ ಬಸವರಾಜ್ ಇವರುಗಳು ಎಚ್ಚರಿಸಿದ್ದಾರೆ.