ವಿಜಯಪುರ/ಕಲಬುರಗಿ, ಮೇ 18: ಲೋಕಾಯುಕ್ತ ಅಧಿಕಾರಿಗಳು ಇಂದು (ಮೇ 18) ಏಕಕಾಲಕ್ಕೆ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯಲ್ಲಿ ದಾಳಿ ಮಾಡಿದ್ದು, ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿಜಯಪುರದ ಸರ್ವೆಯರ್ ಮಲ್ಲಪ್ಪ ಜಂಬಗಿ ಮತ್ತು ಕಲಬುರಗಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಫ್‌ಡಿಎ ಶಿವಶಂಕರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಿಜಯಪುರದ ಸರ್ವೆಯರ್ ಮಲ್ಲಪ್ಪ ಜಂಬಗಿ ಮತ್ತು ಸಹಾಯಕ ಗುರುದತ್ತ ಬಿರಾದಾರ ಜಮೀನಿನ ತಾತ್ಕಾಲಿಕ ಪೋಡಿ ಮಾಡಲು ಪ್ರಕಾಶ್ ಸಿಂಗೆಗೆ ಎಂಬುವರಿಂದ 47,500 ರೂ. ಲಂಚ ಪಡೆಯುವುದು. ಈ ವಿಚಾರ ತಿಳಿದ ಲೋಕಾಯುಕ್ತ ಎಸ್ಪಿ ಮಲ್ಲೇಶ, ಡಿಎಸ್ಪಿ ಸುರೇಶ್ ರೆಡ್ಡಿ, ಸಿಪಿಐ ಆನಂದ ಟಕ್ಕನವರ್ ಮತ್ತು ಆನಂದ ದೋಣಿ ನೇತೃತ್ವದ ತಂಡ ಧಿಡೀರನೆ ದಾಳಿ ಮಾಡಿ, ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಇನ್ನು ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಎಫ್‌ಡಿಎ ಶಿವಶಂಕರ ಎಸ್‌ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ನಕಲು ಪತ್ರ ನೀಡಿ ಅರುಣ್ ಖತೀಬ್ ಎಂಬುವರಿಂದ ಐದು ಸಾವಿರ ಹಣ ಪಡೆಯಲಾಗುತ್ತದೆ. ಈ ವಿಚಾರ ತಿಳಿದು ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಮತ್ತು ಡಿವೈಎಸ್ಪಿ ಗೀತಾ ಬೇನಾಳ್ ನೇತೃತ್ವದ ತಂಡ ದಾಳಿ ಮಾಡಿ ಅಧಿಕಾರಿಯನ್ನು ಬಂಧಿಸಿದ್ದಾರೆ.
ಪಿಡಿಒ ಲೋಕಾಯುಕ್ತ ಬಲೆಗೆ ದೇವನಹಳ್ಳಿ: 3.5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಪಿಡಿಒ ನಿರಂಜನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮ ಪಂಚಾಯ್ತಿ ಪಿಡಿಯೋ ಅರೆಸ್ಟ್ ಆಗಿದ್ದರು. ಜನರಲ್ ಲೈಸೆನ್ಸ್ ನವೀಕರಿಸಲು 5 ಲಂಚಕ್ಕೆ ಡಿಮ್ಯಾಂಡ್ ಲಕ್ಷವನ್ನು ಹೊಂದಿತ್ತು. ಅದ್ರಲ್ಲಿ 3.5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ದೊಡ್ಡಬಳ್ಳಾಪುರ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.