ಬೆಳಗಾವಿ : ದಿನಾಂಕ: 16-05-2024 ರಂದು ರಾತ್ರಿ 11-00 ಘಂಟೆ ಸುಮಾರಿಗೆ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ದಿವಂಗತ,ರಸೂಲಸಾಬ ಬೆಣ್ಣಿರವರ ಮನೆಗೆ
1)ಆಶೀಪ್ ನಜೀರಸಾಬ ಹಾಜಿ,
2) ದಾದಾಪೀರ ನಜೀರಸಾಬ ಹಾಜಿ,
3)ಜಹೂರ’ ನಜೀರಸಾಬ ಹಾಜಿ, 4)ಸಮೀರ್ ನಜೀರಸಾಬ ಹಾಜಿ,
5)ಮಹೃದಹಾಶಿಂ ಮುಸ್ತಫಾ ಹಾಜಿ,
6)ಯೂನೂಸ್ ಮುಸ್ತಫಾ ಹಾಜಿ,
7)ತೌಫೀಕ್ ನೂರಅಹ್ಮದ ಹಾಜಿ.
8)ಲತೀಫ್ ನಜೀರಸಾಬ ಹಾಜಿ ಇವರೆಲ್ಲರೂ ಮನೆಗೆ ಬಂದು ಧಮಕಿ ನೀಡಿ ಅವರ ಮಕ್ಕಳ ಮೇಲೆ ಹಲ್ಲೆ ಮಾಡಲು ಮುಂದಾದ ಸಂದರ್ಭದಲ್ಲಿ ದಿವಂಗತ,ರಸೂಲಸಾಬ ಬೆಣ್ಣಿರವರು ಗಾಬರಿಗೊಂಡು BP ಕಡಿಮೆಯಾಗಿ ಮರಣಹೊಂದಿದ್ದಾರೆ ಎಂದು ಕುಟಂಬಸ್ಥರು ಆರೋಪಿಸಿದ್ದಾರೆ ಮರು ದಿನ ಮಧ್ಯಾಹ್ನ ದಿವಂಗತ,ರಸೂಲಸಾಬ ಬೆಣ್ಣಿರವರು ಶವ ರಾಮದುರ್ಗ ಪೊಲೀಸ್ ಠಾಣೆಗೆ ತಂದು ಮೃತ ರಸೂಲಸಾಬನ ಎಲ್ಲ ಸುಪುತ್ರರು ರಾಮದುರ್ಗ ಪಿಎಸವರಿಗೆ ದೂರವನ್ನು ನೀಡಿದರು ನಂತರ ಶವಸಂಸ್ಕಾರ ನೇರವಾರಿಸಿದರು.
ರಾಮದುರ್ಗ ಪಟ್ಟಣದ ಸಾರ್ವಜನಿಕರು ರಾಮದುರ್ಗದ ಶಕ್ತಿಪೀಠವಾದ ಮನಿ ವಿಧಾನಸಭಾ ಮುಭಾಗದಲ್ಲಿ ಸೇರಿ ತಹಸೀಲ್ದಾರರಿಗೆ ಮನವಿ ನೀಡಿದರು.
ಈಗಾಗಲೇ ಆಶಿಫ್ ನಜೀರಸಾಬ ಹಾಜಿ ಇವನ ಸಹೋದರ, ದಾದಾಪೀರ ನಜೀರಸಾಬ ಹಾಜಿ ಇತನ ಮೇಲೆ ಹಲವಾರು ಕಲಂಗಳು ದಾಖಲಿದ್ದು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಳೇ ತೊರಗಲ್ಲ ಗ್ರಾಮದ ಅಶೀಫ್ ನಜೀರಸಾಬ ಹಾಜಿ ಮತ್ತು ಅವನ ಸಹೋದರರನ್ನು ಗಡೀಪಾರು ಮಾಡುವ ಕುರಿತು ಹಲವಾರು ಮುಖಂಡರು ಮಾತನಾಡಿದರು.
ಈ ಸಂಧರ್ಭದಲ್ಲಿ ಮಾಜಿ ಪುರಸಭೆ ಉಪಾಧ್ಯಕ್ಷ,ರಾಘು ದೊಡಮನಿ, bjp ರಾಮದುರ್ಗ ತಾಲೂಕಾ ಮಂಡಲ ಅಧ್ಯಕ್ಷ ರಾಜೇಶ್ ಬೀಳಗಿ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಶಫಿ ಬೆಣ್ಣಿ, ಜನಪರ ಟ್ರೇಸ್ಟ್ ಅಧ್ಯಕ್ಷ ಸುಭಾಸ ಗೋಡಖೆ, ಶಬ್ಬೀರ ಪಠಾಣ ಲಾಲಸಾಬ್ ತರಕಾರ, ಮುರತುಜಲಿ ಪೆಂಡಾರಿ, ಮುಹಮ್ಮದ್ ಬೇಗ ನಿಗದಿ,ಹಿರಿಯರು ಯುವಕರು ಇನ್ನು ಹಲವಾರು ಉಪಸ್ಥಿತರಿದ್ದರು.