Breaking
Tue. Dec 24th, 2024

ರೋಟರಿ ಕ್ಲಬ್ ನಿಂದ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ…!

ಚಿತ್ರದುರ್ಗ, ಮೇ. 19 : ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಹಾಗಾಗಿ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಕೊಡಬೇಕೆಂದು ಹೆರಿಗೆರಕ್ತದೊತ್ತಡ, ಸಕ್ಕರೆ ಕಾಯಿಲೆ ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಒತ್ತಡದ ಜೀವನ ಕಾರಣ. ಆರೋಗ್ಯದ ಬಗ್ಗೆ ಯಾರು ನಿರ್ಲಕ್ಷೆ ಮಾಡಬಾರದು.
ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಭಾಗವಹಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಬಸಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಹಾಗೂ ಸರ್ಕಾರದ ಸ್ಕೀಂಗಳಿವೆ. ಸಾರ್ವಜನಿಕರು ಪ್ರಯೋಜನ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು. ಮತ್ತು ಸ್ತೀ ರೋಗ ತಜ್ಞೆ ಡಾ. ಚೈತ್ರಾ ರವಿ ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ರೊ.ಕನಕರಾಜ್ ಮಾತನಾಡುತ್ತ ವಿವಿಧ ಆಸ್ಪತ್ರೆಗಳ ವೈದ್ಯರುಗಳನ್ನು ಸಂಪರ್ಕಿಸಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಿಸುತ್ತಿದ್ದೇವೆ. ಎಲ್ಲರೂ ದೊಡ್ಡ ದೊಡ್ಡ ನಗರಗಳಿಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವುದು ಕಷ್ಟ. ಅದಕ್ಕಾಗಿ ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ಪ್ರತಿ ತಿಂಗಳು ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಕೂಡ ರೋಟರಿ ಕ್ಲಬ್‍ನಿಂದ ನಡೆಯುತ್ತದೆ. ಚಳ್ಳಕೆರೆ ರಸ್ತೆಯಲ್ಲಿ ಅಂದಾಜು ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ಡಯಾಲಿಸಿಸ್ ಆಸ್ಪತ್ರೆಯನ್ನು ಕಟ್ಟಿಸುವುದಾಗಿ ತಿಳಿಸಿದರು.
ಕ್ಲಬ್ ರೋಟರಿ ಕ್ಲಬ್ ಪಾಸ್ಟ್ ಪ್ರೆಸಿಡೆಂಟ್ ಎಸ್.ವೀರೇಶ್ ಮಾತನಾಡಿ ರೋಟರಿ ಕ್ಲಬ್ ಮೊದಲಿನಿಂದಲೂ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬರುತ್ತಿದೆ. ಅದರಲ್ಲಿ ಉಚಿತ ಆರೋಗ್ಯ ತಪಾಸಣೆ ಬಹಳ ಮುಖ್ಯವಾದುದು. ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ರೊ.ವಿಕ್ರಾಂತ್‍ಜೈನ್, ಡಾ.ರವಿ ಹೆಚ್.ರಂಗಾರೆಡ್ಡಿ ವೇದಿಕೆಯಲ್ಲಿದ್ದರು. ರೊ.ಸೂರ್ಯನಾರಾಯಣ, ರೊ.ಡಾ.ತಿಪ್ಪೇಸ್ವಾಮಿ, ನಿಯೋಜಿತ ಅಧ್ಯಕ್ಷ ಜಿ.ಎನ್.ವೀರಣ್ಣ, ಸೀನಿಯರ್ ಮಾರ್ಕೆಟಿಂಗ್ ಮ್ಯಾನೇಜರ್ ಪರಶುರಾಂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿದ್ದರು.
ಎಸ್.ಎ.ಎಸ್.ಮೆಡ್ ಫಾರ್ಮದ ಮಂಜುನಾಥ ಉಚಿತವಾಗಿ ಔಷಧಿಗಳನ್ನು ವಿತರಿಸಿದರು. 75 ಮಂದಿಯ ತಪಾಸಣೆ ನಡೆಸಿ ಐದು ಮಂದಿಯ ಮಂಡಿ ಮರುಜೋಡಣೆ, ಆರು ಜನಕ್ಕೆ ಎಕ್ಸರೆ, ನಾಲ್ಕು ಮಂದಿಗೆ ಎಂ.ಆರ್.ಐ. ಸ್ಕ್ಯಾನಿಂಗ್‍ಗೆ ಶಿಫಾರಸ್ಸು ಮಾಡಲಾಯಿತು. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಸಾಮಾನ್ಯ ಪರೀಕ್ಷೆ, ಕೀಲು ಮತ್ತು ಮೂಳೆ, ಸ್ತ್ರೀರೋಗ ತಪಾಸಣೆ ನಡೆಯಿತು.

Related Post

Leave a Reply

Your email address will not be published. Required fields are marked *