Breaking
Wed. Dec 25th, 2024

ಕೃಷಿ ಪ್ರಾಯೋಗಿಕ ಪರೀಕ್ಷಾ ತರಬೇತಿಯ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟನೆ…!

ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಯಲ್ಲಿ ನಗರದ ವಿಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ ಜೊತೆಗೆ ದೈಹಿಕ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಎಂದು ಹಿರಿಯೂರು ತಾಲುಕಿನ ಬಬ್ಬೂರು ಗ್ರಾಮದ ಭಾರತೀಯ ಕೃಷಿ ಅಧ್ಯಯನ ಪರಿಷತ್ತು, ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ.ರುದ್ರಮುನಿ ಪ್ರಕಟಿಸಿದರು.
ಚಿತ್ರದುರ್ಗ ನಗರದ ಪತ್ರಿಕಾಭವನದಲ್ಲಿ ಭಾನುವಾರದಂದು ದೀವಿಗೆ ಎಜುಕೇಷನ್ ಫೌಂಡೇಶನ್ ಹಾಗೂ ವಿ.ಪಿ.ಅಕಾಡೆಮಿ ವತಿಯಿಂದ ಪಿಯುಸಿ ನಂತರ ಮುಂದೇನು? ಮತ್ತು ಕೃಷಿ ಪ್ರಾಯೋಗಿಕ ತರಬೇತಿಯ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ.
ಬಿ.ಎಸ್.ಸಿ ಅಗ್ರಿಕಲ್ಚರ್ ಓದುವ ಮಕ್ಕಳಿಗೆ ಈ ಕಾರ್ಯಾಗಾರವು ಉಪಯುಕ್ತವಾಗಿದೆ. ದೇಶಕ್ಕೆ ಅನ್ನ ಕೊಡುವ ರೈತನ ಬದುಕು ಸತ್ವಪೂರ್ಣವಾದುದು. ಮಕ್ಕಳು ಕೃತಕ ಜೀವನಕ್ಕೆ ಮಾರುಹೋಗದೆ, ಗುಣಮಟ್ಟದ ಕೃಷಿಪದ್ಧತಿಯ ಶಿಕ್ಷಣ ಪಡೆದು ಸಾರ್ಥಕ ಬದುಕನ್ನು ನಡೆಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಇ.ಮಂಜುನಾಥ ಇವರು ಪಿಯುಸಿ ನಂತರ ಮುಂದೇನು.? ಹಾಗೂ ಕೃಷಿ ಪ್ರಾಯೋಗಿಕ ಪರೀಕ್ಷಾ ಪ್ರಾತ್ಯಕ್ಷಿಕೆ ತರಬೇತಿ. ದೀವಿಗೆ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಎಂ.ವಿ.ನಟರಾಜ್, ವಿ.ಪಿ.ಅಕಾಡೆಮಿ ಪ್ರಾಚಾರ್ಯ ಹೆಚ್.ದೇವರಾಜ್, ನಿರ್ದೇಶಕ ಎಸ್.ಕೆ.ದೀಪಕ್ ಹಾಗೂ ವೈ.ಜಿ.ರಾಜು.
ವಿದ್ಯಾರ್ಥಿನಿಯರಾದ ಐಶ್ವರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರಚನಾ ಸ್ವಾಗತಿಸಿದರು. ಸಂಜನಾ ಉಡುಗೊರೆ. ಇನ್ನೂರಿಗಿಂತ ಹೆಚ್ಚು ವಿದ್ಯಾರ್ಥಿ/ನಿಯರು ಕಾರ್ಯಾಗಾರದ ಸದುಪಯೋಗವನ್ನು ಬಯಸಿದ್ದಾರೆ.

Related Post

Leave a Reply

Your email address will not be published. Required fields are marked *