Breaking
Wed. Dec 25th, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ  ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್  ತಂಡವನ್ನು 27 ರನ್‌ಗಳಿಂದ ಸೋಲಿಸಿ ಭರ್ಜರಿ ಜಯ….!

ಬೆಂಗಳೂರು, ಮೇ.19: ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 ರ 68 ನೇ ಆಟಗಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್‌ಗಳಿಂದ ಸೋಲಿಸಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಆರ್‌ಸಿಬಿ ಪ್ಲೇ ಆಫ್‌ಗೆ ರಾಯಲ್ ಎಂಟ್ರಿ ಕೊಡ್ಡಿದೆ, ಆರ್‌ಸಿಬಿ ಗೆಲುವು ಸಾಧಿಸಿದ ಬೆಂಗಳೂರು ತಂಡದ ಅಭಿಮಾನಿಗಳು, ನಗರದ ಬೀದಿಗಳಲ್ಲಿ ಕುಣಿದು ಕುಪ್ಪಳಿಸಿ, ಪಟಾಕಿ ಸಿಡಿಸಿ ಹಬ್ಬ ಮಾಡಿದ್ದಾರೆ.
ಇನ್ನು ಮತ್ತೊಂದೆಡೆ ರಾಜ್ಯದ ಸಿಎಂ ಸಿದ್ದರಾಮಯ್ಯನವರು ಆರ್ಸಿಬಿ ಗೆಲುವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸತತ 6ನೇ ಗೆಲುವಿನೊಂದಿಗೆ RCB ಪ್ಲೇಆಫ್ ರೌಂಡ್ಗೆ ಲಗ್ಗೆ ಇಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯದ ಪ್ರತಿಕ್ಷಣವನ್ನು ಆನಂದಿಸಿದೆ. RCB ಐತಿಹಾಸಿಕ ಗೆಲುವಿನ ಕ್ಷಣಗಳಿಗೆ ಸಾಕ್ಷಿ ಸಾಕ್ಷಿ ನೀಡಿದೆ. ಇದು ನಮ್ಮ ಆರ್ಸಿಬಿ ಹೊಸ ಅಧ್ಯಾಯ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ನಿನ್ನೆ ರಾತ್ರಿ RCB ಗೆದ್ದ ಹಿನ್ನೆಲೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಆರ್ಸಿಬಿ ಆರ್ಸಿಬಿ ಅನ್ನೋ ಜಯಘೋಷ ಎಲ್ಲೆಡೆ ಮೊಳಗಿತ್ತು. ಆರ್ಸಿಬಿ ಚೆನ್ನೈ ವಿರುದ್ಧ ರೋಚಕ ಜಯ ಸಾಧಿಸಿ ಪ್ಲೇ ಆಫ್ಗೆ ರಾಯಲ್ ಆಗಲೇ ಎಂಟ್ರಿ ಕೊಡುತ್ತಿದ್ದಂತೆ ನಗರದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಐಪಿಎಲ್ ಆರಂಭದಲ್ಲಿ ಸತತವಾಗಿ 6 ​​ಪಂದ್ಯಗಳನ್ನು ಆರ್ಸಿಬಿ ಸೋಲುವಂತೆ ಮಾಡಿದೆ, ಇಡೀ ಅಭಿಮಾನಿಗಳ ಪಡೆಗೆ ಸಾಕಷ್ಟು ನಿರಾಸೆಯಾಯಿತು.
ಈ ಬಾರಿಯೂ ಕಪ್ಕೋ ಕನಸು ಭಗ್ನ ಅಂತ ಗೆಲ್ಲಲು ಜನ ನೊಂದುಕೊಂಡಿದ್ರು. ಇನ್ನೂ ಕೆಲವರಂತೂ, ಆರ್ಸಿಬಿ ಮ್ಯಾನೇಜ್ಮೆಂಟ್ ಹಾಗೂ ಬೌಲರ್ಗಳ ಕಳಪೆ ಪ್ರದರ್ಶನದ ವಿರುದ್ಧ ಶಾಪ ಹಾಕಿದ್ರು. ಸತತ ಸೋಲು, ಅಭಿಮಾನಿಗಳ ಬೇಸರದಿಂದ ಕಂಗೆಟ್ಟ ಆರ್ಸಿಬಿ ಪಡೆ, ಅದ್ಯಾವ ಶಪಥ ಮಾಡಿದ್ಯೋ ಗೊತ್ತಿಲ್ಲ.
ಆದರೆ, ಕಳೆದ ಸತತ 6 ಪಂದ್ಯಗಳಲ್ಲಿ ನಡೆದಿದ್ದು ಮಾತ್ರ ಹೊಸ ಅಧ್ಯಾಯವೇ ಸರಿ. ಗುಜರಾತ್, ಹೈದರಾಬಾದ್, ಪಂಜಾಬ್, ಡೆಲ್ಲಿ, ಚೆನ್ನೈ ಹೀಗೆ ಎಲ್ಲಾ ತಂಡಗಳ ವಿರುದ್ಧ ಸಾಲು ಸಾಲು ಗೆಲುವಿನ ಮೂಲಕ ಆರ್ಸಿಬಿ ಪುಟಿದೆ. ಎಲ್ಲಾ ಮುಗಿದೇ ಹೋಯ್ತು ಎಂದಿದ್ದ ಅಭಿಮಾನಿಗಳ ಮುಖದಲ್ಲಿ ಮತ್ತೆ ಕಪ್ ಗೆದ್ದು ಇತಿಹಾಸ ಸೃಷ್ಟಿಸುವ ಕನಸನ್ನು ಚಿಗುರೊಡೆದಿದೆ. ಪ್ಲೇ ಆಫ್ಗೆ ನೆಚ್ಚಿನ ತಂಡ ಬೆಂಗಳೂರು ಲಗ್ಗೆ ಇಡುತ್ತಿದ್ದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದ್ದಾರೆ.
ಈ ಬಾರಿಯ ಐಪಿಎಲ್ ಆರಂಭವಾಗಿ ಇಡೀ ಆರ್ಸಿಬಿ ಅಭಿಮಾನಿಗಳ ಬಾಯಲ್ಲಿ ಬಾಯ್ಪಾಠ ಆಗಿದ್ದು ಒಂದೇ ಮಾತು. ಇದು ಆರ್ಸಿಬಿ ಹೊಸ ಅಧ್ಯಾಯ ಅನ್ನೋ ಘೋಷವಾಖ್ಯವದು. ಸತತ 6 ಪಂದ್ಯ ಸೋತ ಕ್ಯಾಪ್ಟನ್ ಡುಪ್ಲೆಸಿ ಸೇನೆ, ವಿಶ್ವಾಸ ಕಳೆದುಕೊಳ್ಳಲಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾವುದೇ ಆಟಗಾರನ ತಲೆಗೆ ಸೋಲಿನ ಭಾರ ಹೊರಿಸದೇ, ಮುಂದಿನ ಗೆಲುವಿಗಾಗಿ ಒಗ್ಗಟ್ಟಿನ ಸಮರ ಆರಂಭಿಸಿದ್ದೇ ಆರ್ಸಿಬಿ ಗೆಲುವಿನ ಅಶ್ವಮೇಧ ಯಾಗಕ್ಕೆ ಕಾರಣ.
ಡ್ರೆಸ್ಸಿಂಗ್ ರೂಮ್ನ ಈ ಸತ್ಯದ ಬಗ್ಗೆ ಬೌಲರ್ ಯಶ್ ದಯಾಳ್ ರಿವೀಲ್ ಮಾಡಿದ್ರು. ನಾವು ಸತತವಾಗಿ ಸೋತಾಗ. ಯಾವುದೇ ಆಟಗಾರನ ಮೇಲೆ ದೂಷಣೆ ಮಾಡಿಲ್ಲ. ಎಲ್ಲರೂ ಸಮಾನ ನೋವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಆ ಪಾಸಿಟಿವ್ ನಡೆಯಿಂದಲೇ, ಅಭಿಮಾನಿಗಳಿಗೆ ನಾವು ಗೆಲ್ಲಲೇಬೇಕು ಅನ್ನೋ ಛಲ ಬಂದಿದೆ ಅಂತ ಯಶ್ ದಯಾಳ್ ಹೇಳಿದ್ದಾರೆ. ಇದೇ ಸ್ಥಿತಿಯಲ್ಲಿ ಆಡಿದ ಆರ್ಸಿಬಿ ಪಡೆ ಇದೀಗ, ಸತತ 6 ಗೆಲುವುಗಳ ಮೂಲಕ ಪ್ಲೇ ಆಫ್ಗೆ ಲಗ್ಗೆ ಇಟ್ಟು ಅಬ್ಬರಿಸುತ್ತಿದೆ.

Related Post

Leave a Reply

Your email address will not be published. Required fields are marked *