Breaking
Tue. Dec 24th, 2024

ಅಜರ್‌ ಬೈಜಾನ್‌ನಿಂದ ಟೆಹ್ರಾನ್‌ಗೆ ಹಿಂದಿರುಗುತ್ತಿದ್ದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ

ನವದೆಹಲಿ/ಟೆಹ್ರಾನ್ : ಅಜರ್‌ ಬೈಜಾನ್‌ನಿಂದ ಟೆಹ್ರಾನ್‌ಗೆ ಹಿಂದಿರುಗುತ್ತಿದ್ದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ , ವಿದೇಶಾಂಗ ಸಚಿವರು ಮತ್ತು ಇತರ ಉನ್ನತ ಶ್ರೇಣಿಯ ಅಧಿಕಾರಿಗಳನ್ನು ಒಳಗೊಂಡ ಹೆಲಿಕಾಪ್ಟರ್ ಪತನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ  ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಮೋದಿ, ಇರಾನ್ ಅಧ್ಯಕ್ಷ  ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಸಂಬಂಧಿಸಿದ ಸುದ್ದಿ ಕೇಳಿ ಬಂದಿದೆ. ಈ ಸಂಕಷ್ಟದ ಸಮಯದಲ್ಲಿ ನಾವು ಇರಾನ್ ಜನರೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಪತನವಾದ ಹೆಲಿಕಾಪ್ಟರ್‌ನಲ್ಲಿದ್ದವರು ಶೀಘ್ರವೇ ಸುರಕ್ಷಿತವಾಗಿ ಹಿಂತಿರುಗಿ ಎಂದು ಸೂಚಿಸಲಾಗಿದೆ.
ಇಬ್ರಾಹಿಂ ರೈಸಿ ಮತ್ತು ಅವರ ವಿದೇಶಾಂಗ ಸಚಿವರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಅಜರ್‌ಬೈಜಾನ್  ಗಡಿಗೆ ಭೇಟಿ ನೀಡಿ ಹಿಂದಿರುಗುವ ಮಾರ್ಗದಲ್ಲಿ ದಟ್ಟ ಮಂಜಿನಲ್ಲಿ ಪರ್ವತ ಪ್ರದೇಶವನ್ನು ದಾಟುತ್ತಿದ್ದಾಗ ಅಪಘಾತಕ್ಕೀಡಾಗಿದೆ. ಇಸ್ರಾನ್-ಇರಾನ್ ಸಂಘರ್ಷ ತಾರಕಕ್ಕೇರಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಅಮೀರ್ ನಾಪತ್ತೆ, 65 ತಂಡಗಳಿಂದ ತೀವ್ರ ಶೋಧ ನಡೀತಾ ಇದೆ. ಪ್ರತಿಕೂಲ ಹವಾಮಾನ ವೈಪರಿತ್ಯ ಕಾಪ್ಟರ್ ಪತನಗೊಂಡಿರಬೇಕಾಗಿದೆ. ದೇಶದಾದ್ಯಂತ ರೈಸಿಗಾಗಿ ಪ್ರಾರ್ಥಿಸಲಾಗುತ್ತಿದೆ.
63 ವಯಸ್ಸಿನ ರೈಸಿ 2021 ರಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧಿಕಾರ ವಹಿಸಿಕೊಂಡಿದ್ದರಿಂದ ನೈತಿಕತೆಯ ಕಾನೂನುಗಳನ್ನು ಬಿಗಿಗೊಳಿಸುವಂತೆ ಸೂಚಿಸಿದ್ದರು. ವಿಶ್ವ ಶಕ್ತಿಯೊಂದಿಗೆ ಪರಮಾಣು ಮಾತುಕತೆಗಳನ್ನು ತಳ್ಳಿಹಾಕಿದ್ದರು.

Related Post

Leave a Reply

Your email address will not be published. Required fields are marked *