ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ಸಿನಿಮಾಗಳಿಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಇದೇ ಮೇ 24ರಂದು ‘ಕೆಡಿ’ ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿಯನ್ನು ಧ್ರುವ ಸರ್ಜಾ ಹಂಚಿಕೊಳ್ಳಲಿದ್ದಾರೆ. ಹಾಗಂತ ಸುದ್ದಿಯೊಂದು ಹರಿದಾಡುತ್ತಿದೆ.
ಧ್ರುವ ಸರ್ಜಾ ಅವರು ‘ಮಾರ್ಟಿನ್’ ಮತ್ತು ‘ಕೆಡಿ’ ಸಿನಿಮಾವನ್ನು ಮುಗಿಸಿಕೊಟ್ಟಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಬಾಕಿಯುಳಿದಿರುವ ಕೆಲಸಗಳು ನಡೆಯುತ್ತಿದೆ. ಎಲ್ಲಾ ಕೆಲಸ ಪಕ್ಕಾ ಆದ್ಮೇಲೆ ಚಿತ್ರಮಂದಿರದಲ್ಲಿ ಸಿನಿಮಾ ಅಬ್ಬರಿಸಲಿದೆ.
ಸದ್ಯ ಧ್ರುವ ಸರ್ಜ ನಟನೆಯ ಕೆಡಿ ಚಿತ್ರದ ಬಗ್ಗೆ ಸಮಾಚಾರವೊಂದು ಹರಿದಾಡುತ್ತಿದೆ. ಇದೇ ಮೇ 24ರಂದು ಸಿನಿಮಾಗೆ ಸಂಬಂಧಿಸಿದ ಘೋಷಣೆಯೊಂದು ನಡೆಯಲಿದೆ ಎಂದು ಹೇಳಲಗುತ್ತಿದೆ. ಯಾವ ಎಂಬುದನ್ನು ಮೇ 24ರವರೆಗೂ ಕಾದುನೋಡಬೇಕಿದೆ.
‘ಕೆಡಿ’ ಚಿತ್ರವನ್ನು ಡೈರೆಕ್ಟರ್ ಪ್ರೇಮ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಮಲ್ಟಿಸ್ಟಾರ್ಸ್ ನಟಿಸಿದ್ದಾರೆ. ಧ್ರುವ ಸರ್ಜಾ ಜೊತೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ, ರಮೇಶ್ ಅರವಿಂದ್, ರವಿಚಂದ್ರನ್ ಸೇರಿದಂತೆ ಅನೇಕರು ನಟಿಸಿದ್ದಾರೆ.