ಚಳ್ಳಕೆರೆ : ಪದವಿ ಶಿಕ್ಷಣ ಕಲಿಕೆಯ ಹಂತದಲ್ಲೇ ಕಲೆ, ಸಾಹಿತ್ಯ ಹಾಗೂ ಸಂಗೀತದ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಪ್ರೊ.ಬಿ.ಎಸ್.
ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಕಲಿಕೆಯೊಂದಿಗೆ ಕೌಶಲ್ಯ ಕಾರ್ಯಕ್ರಮದಡಿಯಲ್ಲಿ ನಗರದ ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಧ್ಯಮ ಮತ್ತು ಸಿನಿಮಾ’ ತಯಾರಿಕೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.
ಕಲಿಕೆ ಜೊತೆ ನಾಟಕ, ಚಲನಚಿತ್ರ, ದಾರವಾಹಿ, ಕಿರು ಚಿತ್ರ ನಿರ್ಮಾಣ ಸೇರಿದಂತೆ ವಿವಿಧ ಕೌಶಲ್ಯ ವೃದ್ಧಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಮಾದರಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರೊಫೆಸರ್ ಕೆ.ಚಿತ್ತಯ್ಯ ಮಾತನಾಡಿ ನಾನು ಸಹ ವಿದ್ಯಾರ್ಥಿಯಿಂದ ನೀನಾಸಂ ತರಬೇತಿಗೆ ಹೋಗಲು ಪ್ರಯತ್ನ ಪಡಲು ಇಲ್ಲಿಯವರೆಗೆ ಆಗುತ್ತಿಲ್ಲ ಆ ಸಂದರ್ಭದಲ್ಲಿ ಹೋಗಲಿಕ್ಕೆ ಹಣ ಇಲ್ಲ ಈಗ ಸಮಯ ಸಿಗುತ್ತಿಲ್ಲ. ಆದರೆ ನಿಮಗೀಗ ಇಂತಹ ಸುವರ್ಣಾವಕಾಶ ದೊರೆತಿದೆ ಇದರ ಸದುಪಯೋಗ ಪಡೆದುಕೊಂಡಿದೆ.
ಪ್ರೊ.ಕೃಷ್ಣಮೂರ್ತಿ, ಮಾತನಾಡಿ ಕಥೆ ಹೇಳುವ ಕಲೆ ಉತ್ಸಾಹ ಮತ್ತು ಸಂಯೋಜನೆಯಿಂದ ಬರುತ್ತದೆ. ಆದರೆ ಚಲನಚಿತ್ರ ತಯಾರಿಕಾ ಕಲೆ ತರಬೇತಿಯಿಂದಲೇ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಮಾಜಶಾಸ್ರ್ತ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಕೆ.ದೇವಪ್ಪ, ಮಾತನಾಡಿ, ಮನುಷ್ಯ ತನ್ನ ಬದುಕಿನಲ್ಲಿ ಕಲಿತ ಕಲೆಗಳು ಕೆಲವೊಮ್ಮೆ ಅವನ ಜೀವನೋಪಾಯಕ್ಕೂ ನೆರವಾಗುತ್ತವೆ. ಯಾವುದೇ ನಾಟಕ, ಸಿನಿಮಾ ಕಲೆ ಕಲಿಕೆಯಲ್ಲಿ ವಿದ್ಯಾರ್ಥಿಗಳು ನಿರಾಸಕ್ತಿ ತೋರಬಾರದು ಎಂದು ಹೇಳಿದರು.
ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ರಾಜಕುಮಾರ್. ಚಲನಚಿತ್ರ ತರಬೇತುದಾರ ದಾವಣಗೆರೆ ಮಹೇಶ್, ಮಂಜುನಾಥ್, ವೆಂಕಟೇಶ್, ಐಸಿಯುಇಸಿ ಸಂಚಾಲಕ ಪ್ರೊ.ಎಚ್.ತಿಪ್ಪೇಸ್ವಾಮಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಚನ್ನಕೇಶ, ಎ.ಪವನ್‌ಕುಮಾರ್ ಇದ್ದರು.