ಭದ್ರಾವತಿ: ತಾಲ್ಲೂಕಿನ ಬಾಬಳ್ಳಿ ಗ್ರಾಮದಲ್ಲಿ ಗಂಗಾ ಪೂಜೆ ಮಾಡಲು ಹೋಗಿದ್ದ ಭಕ್ತರ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು, ಹಲವರನ್ನ ಶಿವಮೊಗ್ಗ ಹಾಗೂ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಸಿದ್ದತೆ ವೇಳೆ ಈ ಘಟನೆ ನಡೆದಿದ್ದು, ಬಾಬಳ್ಳಿಯ ನಿವಾಸಿಗಳು ಗಂಗೆ ಪೂಜೆ ಮಾಡಲು ಹೊರಟಿದ್ದರು. ಈ ವೇಳೆ ಅಲ್ಲಿಯೇ ಪೊದೆಯೊಂದರಲ್ಲಿ ಕಟ್ಟಿದ್ದ ಹೆಜ್ಜೇನುಗಳು ಮೇಲಕ್ಕೆದ್ದಿವೆ. ಅಲ್ಲದೆ ಗಂಗೆಪೂಜೆಯಲ್ಲಿದ್ದ ವರ ಮೇಲೆ ದಾಳಿ ಮಾಡಿವೆ.
ಹೆಜ್ಜೇನುಗಳ ದಾಳಿಯಲ್ಲಿ ಎರಡು ವರ್ಷದ ಮಗು ಸಹ ಸಿಲುಕಬೇಕಿತ್ತು. 12 ವರ್ಷದ ಬಾಲಕ ಗಗನ್ 10 ಕ್ಕೂ ಹೆಚ್ಚು ಹೆಜ್ಜೇನು ಕಚ್ಚಿಸಿಕೊಂಡರೂ ಸಹ ಎರಡು ವರ್ಷದ ಬಾಲಕನ ರಕ್ಷಣೆ ಮಾಡಿ ಸಾಹಸ ಮೆರೆದಿದ್ದಾನೆ. ರಕ್ಷಣೆ ಮಾಡಿದ ಬಾಲಕನನ್ನ ಸ್ಥಳೀಯರು ಶ್ಲಾಘಿಸಿದ್ದಾರೆ.